ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಡುಪಿ, ಇದರ 9 ನೇ ವರ್ಷದ ಶಾರದಾಪೂಜೆ ಯು ಅಕ್ಟೋಬರ್ 9 ನೇ ತಾರೀಕಿನಿಂದ ಪ್ರಾರಂಭಗೊಂಡು 12 ನೇ ತಾರೀಕಿನವರೆಗೆ ಉಡುಪಿ ಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಶರನ್ನವರಾತ್ರಿಯ ಪ್ರಯುಕ್ತ ,4 ದಿನಗಳ ಕಾಲ ನಡೆಯಲಿರುವ ಈ ಸಂಭ್ರಮದ ಕಾರ್ಯಕ್ರಮದಲ್ಲಿ ,9 ನೇ ತಾರೀಕಿನ ಮೊದಲ ದಿನದಂದು ಬೆಳಿಗ್ಗೆ , ಪೂಜಾ ವಿಧಿವಿಧಾನಗಳೊಂದಿಗೆ ಶಾರದಾದೇವಿಯ ವಿಗ್ರಹ ಪ್ರತಿಷ್ಠೆ, ಮಧ್ಯಾಹ್ನ 3 ಗಂಟೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶಾರದೆಯ ಚಿತ್ರ ಬಿಡಿಸುವ ಸ್ಪರ್ಧೆ, ಹಾಗೂ ಭಕ್ತಿಗೀತೆ ಹಾಡುವ ಸ್ಪರ್ಧೆ ಯು ನಡೆಯಲಿದ್ದು ,ಸಂಜೆ 5.30 ಗೆ “ಉಡುಪಿ ದಸರಾ”ಶಾರದೋತ್ಸವದ ಉದ್ಘಾಟನಾ ಸಮಾರಂಭ, ಆ ಬಳಿಕ , ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನೆಯು ಜರುಗಲಿರುವುದು. ದಿನಾಂಕ 10 ರಂದು ಸಂಜೆ 5 ರಿಂದ ಬಾಲ ಪ್ರತಿಭೆಗಳಿಂದ “ಭಕ್ತಿ ಲಹರಿ “ಕಾರ್ಯಕ್ರಮ ಹಾಗೂ 6 ಗಂಟೆಗೆ ಮಹಿಳಾ ಸದಸ್ಯೆಯರಿಂದ ದಾಂಡಿಯಾ ನೃತ್ಯವು ನಡೆಯಲಿರುವುದು. ದಿನಾಂಕ 11 ರಂದು ಸಂಜೆ 5 ರಿಂದ, ಖ್ಯಾತ ಗಾಯಕ ಜಯರಾಂ ಶೆಟ್ಟಿಗಾರ್ ಮಣಿಪಾಲ ಮತ್ತು ತಂಡದವರಿಂದ “ಭಕ್ತಿ ಸಂಗೀತ” ಕಾರ್ಯಕ್ರಮವು ನಡೆಯಲಿದ್ದು, ಶಾರದೋತ್ಸವದ ಕೊನೆಯ ದಿನವಾದ 12 ನೇ ತಾರೀಕಿನಂದು ಬೆಳಿಗ್ಗೆ 10 ಗಂಟೆಗೆ ಚಂಡಿಕಾ ಯಾಗವು ನಡೆಯಲಿದೆ. ಸಂಜೆ 4 ಗಂಟೆಗೆ ಸರಿಯಾಗಿ, ಗೋವಿಂದ ಕಲ್ಯಾಣ ಮಂಟಪದಿಂದ ಶ್ರೀಶಾರದಾಮಾತೆ ಯ ವಿಸರ್ಜನಾ ಮೆರವಣಿಗೆಯು ನಡೆಯಲಿರುವುದು ಎಂದು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಯ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.