44ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ – 2023ರ ಫಲಿತಾಂಶ
(ದಿ। ಡಾ। ಟಿ.ಎಂ.ಎ ಪೈ, ದಿ। ಎಸ್. ಎಲ್. ನಾರಾಯಣ ಭ unಟ್ ಮತ್ತು ದಿ। ಮಲ್ಪೆ ಮಧ್ವರಾಜ್ ಸ್ಮಾರಕ )
ಪ್ರಥಮ ಬಹುಮಾನವು “ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು ” ತಂಡದ “ದ್ರೋಪತಿ ಹೇಳ್ತವ್ಳೆ ” ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ.ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಮತ್ತು ಡಾ| ಟಿ.ಎಮ್.ಎ.ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ದಿ| ಎಸ್. ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆ ತನ್ನದಾಗಿಸಿಕೊಂಡಿದೆ.
ದ್ವಿತೀಯ ಬಹುಮಾನವಾದ ದಿ| ಮಲ್ಪೆ ಮಧ್ವರಾಜ್ ಸ್ಮಾರಕ ಶ್ರೀ ಪ್ರಮೋದ್ ಮಧ್ವರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ ಮತ್ತು ಯು.ಪಿ. ಶೆಣೈ ಸ್ಮಾರಕ ಸ್ಮರಣಿಕೆಯು “ರಂಗರಥ (ರಿ.) ಬೆಂಗಳೂರು ” ತಂಡದ “ಕ್ರೌಂಚಗೀತಾ ” ನಾಟಕಕ್ಕೆ ಲಭಿಸಿದೆ.
ತೃತೀಯ ಬಹುಮಾನವನ್ನು ” ರಂಗಪಯಣದ (ರಿ.) ಬೆಂಗಳೂರು ” ತಂಡದ “ಚಂದ್ರಗಿರಿ ತೀರದಲ್ಲಿ” ನಾಟಕವು ಪಡೆದು ಕೊಂಡಿದ್ದು, ದಿ| ಪಿ. ವಾಸುದೇವ ರಾವ್ ಅವರ ಸ್ಮರಣಾರ್ಥ ಶ್ರೀಮತಿ ಸೀತಾ ವಾಸುದೇವ ರಾವ್ ಅವರ ಕೊಡುಗೆಯಾದ ನಗದು ಬಹುಮಾನವಾದ ರೂ.15,000/- ಮತ್ತು ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆಗೆ ಪಾತ್ರವಾಗಿದೆ.
ಬಹುಮಾನಗಳ ವಿವರ :
ಶ್ರೇಷ್ಠ ನಿರ್ದೇಶನ :
ಪ್ರಥಮ : ರಂಗ ನಿರ್ದೇಶಕ ದಿ|ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ರೂ.5,000 ನಗದು ಮತ್ತು ದಿ| ಜಿ.ಕೆ. ಐತಾಳ್ ಸ್ಮಾರಕ ನಗದು ರೂ.5,000 ಸೇರಿದಂತೆ ಒಟ್ಟು ರೂ.10,000/- ನಗದು ಹಾಗೂ ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕ
ಮತ್ತು ಮಲ್ಪೆ ಮಧ್ವರಾಜ್ ಸ್ಮಾರಕ ಸ್ಮರಣಿಕೆ –
ಶ್ರೇಷ್ಠ ನಿರ್ದೇಶಕ – ಶ್ರೀ ಗಣೇಶ್ ಮಂದಾರ್ತಿ
ನಾಟಕ – ದ್ರೋಪತಿ ಹೇಳ್ತವ್ಳೆ “
ತಂಡ – ” ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು
ಶ್ರೇಷ್ಠ ನಿರ್ದೇಶನ ದ್ವಿತೀಯ : ದಿ| ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ದಿ| ಜಿ.ಕೆ. ಐತಾಳ್ ಸ್ಮಾರಕ ನಗದು ರೂ.3,000 ಸೇರಿದಂತೆ ಒಟ್ಟು ₹ 6,000/- ಹಾಗೂ ದಿ|ವಿ. ಪ್ರಭಾಕರ ಹೆಗ್ಡೆ ಸ್ಮಾರಕ ಸ್ಮರಣಿಕೆ.
*ನಿರ್ದೇಶಕ ದ್ವಿತೀಯ – * ಶ್ರೀ ಆಸಿಫ್ ಕ್ಷತ್ರಿಯ & ಶ್ವೇತಾ ಶ್ರೀನಿವಾಸ್”*
ನಾಟಕ – ” ಕ್ರೌಂಚಗೀತಾ “
ತಂಡ – ರಂಗರಥ (ರಿ.) ಬೆಂಗಳೂರು”
ಶ್ರೇಷ್ಠ ನಿರ್ದೇಶನ ತೃತೀಯ : ದಿ| ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ನಗದು ಬಹುಮಾನ ರೂ.2,000 ಮತ್ತುದಿ|ಜಿ.ಕೆ. ಐತಾಳ್ ಸ್ಮಾರಕ ರೂ.2000 ಸೇರಿದಂತೆ ಒಟ್ಟು ₹ 4,000/- ಡಾ. ಬಿ.ಬಿ. ಶೆಟ್ಟಿ ಸ್ಮಾರಕ ಸ್ಮರಣಿಕೆ.
ನಿರ್ದೇಶನ ತೃತೀಯ – ಶ್ರೀಮತಿ ನಯನಾ ಜೆ.ಸೂಡ”
ನಾಟಕ – ” ಚಂದ್ರಗಿರಿ ತೀರದಲ್ಲಿ “ ತಂಡ – “ರಂಗಪಯಣ (ರಿ.) ಬೆಂಗಳೂರು”
ಶ್ರೇಷ್ಠ ನಟ :
ಪ್ರಥಮ : ದಿ| ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.3,000 ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ –
“ ಕಲಾಮೈತ್ರಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು” ತಂಡದ “ಮಂಟೇಸ್ವಾಮಿ ಕಥಾ ಪ್ರಸಂಗ” ನಾಟಕದ “ನೀಲಗಾರ ” ಪಾತ್ರಧಾರಿ ” ಶ್ರೀ ಗೋಪಾಲಕೃಷ್ಣಪ್ಪ ಎನ್. “
ದ್ವಿತೀಯ : ದಿ|ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.2,000 ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ –
“ಸಮುದಾಯ ದಾರವಾಡ (ರಿ.) “ ತಂಡದ ” ದೇವರ ಹೆಣ ” ನಾಟಕದ ” ಠೊಣ್ಣಿ ” ಪಾತ್ರಧಾರಿ ” ಶ್ರೀ ಜೋಸೆಫ್ ಮಲ್ಲಾಡಿ”
ತೃತೀಯ : ದಿ|ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.1,000 ಮತ್ತು ರೋಟರಿ ಕ್ಲಬ್ ಉಡುಪಿ-ಮಣಿಪಾಲ
ಪ್ರಾಯೋಜಿತ ಸ್ಮರಣಿಕೆ –
“ಕಲಾಮೈತ್ರಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು” ತಂಡದ “ಮಂಟೇಸ್ವಾಮಿ ಕಥಾ ಪ್ರಸಂಗ ” ನಾಟಕದ “ಮಂಟೇಸ್ವಾಮಿ ” ಪಾತ್ರಧಾರಿ ” ಶ್ರೀ ಕೆ.ಶಂಕರ್ “.
ಶ್ರೇಷ್ಠ ನಟಿ :-
ಪ್ರಥಮ : ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ. 3,000 ಮತ್ತು ದಿ| ಶ್ರೀನಿವಾಸ ಎಸ್. ಶೆಟ್ಟಿಗಾರ್ ಸ್ಮಾರಕ ಸ್ಮರಣಿಕೆ –
” ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು” ತಂಡದ “ದ್ರೋಪತಿ ಹೇಳ್ತವ್ಳೆ” ನಾಟಕದ “ದ್ರೋಪತಿ -3 ” ಪಾತ್ರಧಾರಿಣಿ ” ವೈಷ್ಣವಿ ಶ್ರೀಕಾಂತ್ ಚಕ್ರಪಾಣಿ”.
ದ್ವಿತೀಯ (ತಲಾ ಇಬ್ಬರಿಗೆ ): ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ. 2,000 ಮತ್ತು ದಿ|ಶ್ರೀನಿವಾಸ ಎಸ್. ಶೆಟ್ಟಿಗಾರ್ ಸ್ಮಾರಕ ಸ್ಮರಣಿಕೆ –
“ರಂಗಪಯಣ (ರಿ.) ಬೆಂಗಳೂರು” ತಂಡದ “ಚಂದ್ರಗಿರಿ ತೀರದಲ್ಲಿ” ನಾಟಕದ “ನಾದಿರ” ಪಾತ್ರದಾರಿಣಿ ” ನಯನಾ ಜೆ. ಸೂಡ”
“ರಂಗರಥ (ರಿ.) ಬೆಂಗಳೂರು “ ತಂಡದ ” ಕ್ರೌಂಚಗೀತಾ” ನಾಟಕದ “ಸೀತಾ” ಪಾತ್ರಧಾರಿಣಿ “ಶ್ವೇತಾ ಎಸ್”.
ತೃತೀಯ (ತಲಾ ಇಬ್ಬರಿಗೆ ): ಅಭಿನೇತ್ರಿ ಶ್ರೀಮತಿ ವಿನಯಾ ಪ್ರಸಾದ್ ಪ್ರಾಯೋಜಿತ ನಗದು ಬಹುಮಾನ ರೂ. 1,000 ಮತ್ತು ದಿ| ಯು. ದುಗ್ಗಪ್ಪ ಸ್ಮಾರಕ ಸ್ಮರಣಿಕೆ –
“ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು” ತಂಡದ “ದ್ರೋಪತಿ ಹೇಳ್ತವ್ಳೆ “ ನಾಟಕದ “ದ್ರೋಪತಿ -2” ಪಾತ್ರಧಾರಿಣಿ ” ಅನನ್ಯ ಸುರೇಶ್ “
” ರಂಗಪಯಣ (ರಿ.) ಬೆಂಗಳೂರು “ ತಂಡದ ” ಚಂದ್ರಗಿರಿ ತೀರದಲ್ಲಿ” ನಾಟಕದ ” ಫಾತಿಮಾ “ ಪಾತ್ರಧಾರಿಣಿ ” ಚೇತನಾ ಪ್ರಸಾದ್ “
ಶ್ರೇಷ್ಠ ಸಂಗೀತ :-
ಪ್ರಥಮ : ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.3,000 ಮತ್ತು ದಿ| ಉಡುಪಿ ದಾಸ ಭಟ್ ಸ್ಮಾರಕ ಸ್ಮರಣಿಕೆ –
ಪ್ರಥಮ : ‘ಭಿನ್ನಷಡ್ಗ” ನಾಟಕ – “ಕ್ರೌಂಚಗೀತಾ” ತಂಡ – ” ರಂಗರಥ (ರಿ.) ಬೆಂಗಳೂರು “
ದ್ವಿತೀಯ : ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ದಿ| ಉಡುಪಿ ದಾಸ ಭಟ್ ಸ್ಮಾರಕ ಸ್ಮರಣಿಕೆ :
ನಾಟಕ -” ದ್ರೋಪತಿ ಹೇಳ್ತವ್ಳೆ”, ತಂಡ – “ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು”
ತೃತೀಯ : ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.1,000 ಮತ್ತು ಹೋಟೆಲ್ ಡಯನಾ ಪ್ರಾಯೋಜಿತ ಸ್ಮರಣಿಕೆ : ” ಶ್ರೀಚಂದ್ರಶೇಖರಾಚಾರ್ ಹೆಗ್ಗೋಟಾರ”, ನಾಟಕ – ” ಮಂಟೇಸ್ವಾಮಿ ಕಥಾ ಪ್ರಸಂಗ”
ತಂಡ – “ಕಲಾಮೈತ್ರಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು “
ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ :-
ಪ್ರಥಮ : ದಿ| ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 3,000 ಮತ್ತು ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನ ಪ್ರಾಯೋಜಿತ ಸ್ಮರಣಿಕೆ –
ನಾಟಕ – ” ದ್ರೋಪತಿ ಹೇಳ್ತವ್ಳೆ”
ತಂಡ – ” ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು “
ದ್ವಿತೀಯ : ದಿ|ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 2,000 ಮತ್ತು ಹೋಟೆಲ್ ತಾಂಬೂಲಮ್ ಪ್ರಾಯೋಜಿತ ಸ್ಮರಣಿಕೆ –
ನಾಟಕ – “ಕ್ರೌಂಚಗೀತಾ “
ತಂಡ – ” ರಂಗರಥ (ರಿ.) ಬೆಂಗಳೂರು”
ತೃತೀಯ : ದಿ|ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 1,000 ಮತ್ತು ಹೋಟೆಲ್ ಡಯನಾ ಪ್ರಾಯೋಜಿತ ಸ್ಮರಣಿಕೆ –
ನಾಟಕ – “ದೇವರ ಹೆಣ “
ತಂಡ – ” ಸಮುದಾಯ (ರಿ.)ಧಾರವಾಡ”
ಶ್ರೇಷ್ಠ ಪ್ರಸಾಧನ :-
ಪ್ರಥಮ : ದಿ। ಉಷಾ ಶಾಂತಾರಾಮ್, ದಿ। ಎಸ್ ಎಲ್ ನಾರಾಯಣ ಭಟ್ ಮತ್ತು ದಿ। ಟಿ. ಉಪೇಂದ್ರ ಪೈ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನ ಪ್ರಾಯೋಜಿತ ಸ್ಮರಣಿಕೆ –
ಶ್ರೀ ಭುವನ್ ಮಣಿಪಾಲ ಮತ್ತು ಶ್ರೀ ರವಿಕುಮಾರ್
ನಾಟಕ – “ದ್ರೋಪತಿ ಹೇಳ್ತವ್ಳೆ”
ತಂಡ – ” ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು “
ದ್ವಿತೀಯ (ತಲಾ ಇಬ್ಬರಿಗೆ): ರಂಗನಟ ಯು.ಎಂ.ಅಸ್ಲಾಂ ಪ್ರಾಯೋಜಿತ ನಗದು ಬಹುಮಾನ ರೂ. 2,000 ಮತ್ತು ದಿ| ವಿ. ಪ್ರಭಾಕರ ಹೆಗ್ಡೆ ಸ್ಮಾರಕ ಸ್ಮರಣಿಕೆ -.
ಶ್ರೀ ಜೈರಾಜ್ ಹುಸ್ಕೂರು
ನಾಟಕ – ” ಚಂದ್ರಗಿರಿ ತೀರದಲ್ಲಿ”
ತಂಡ – ” ರಂಗಪಯಣ (ರಿ.) ಬೆಂಗಳೂರು “
ನಾಟಕ: ” ಕ್ರೌಂಚಗೀತಾ” ನಾಟಕ, ತಂಡ – ರಂಗರಥ (ರಿ.) ಬೆಂಗಳೂರು
ತೃತೀಯ (ತಲಾ ಇಬ್ಬರಿಗೆ ): ಸದಾನಂದ ಸುವರ್ಣ, ಮುಂಬಾಯಿ ಪ್ರಾಯೋಜಿತ ನಗದು ಬಹುಮಾನ ರೂ.1,000 ಮತ್ತು ದಿ| ಮಲ್ಪೆ ಮಧ್ವರಾಜ್ ಸ್ಮಾರಕ ಸ್ಮರಣಿಕೆ -.
“ಶ್ರೀ ದಿನೇಶ್ ಚಮ್ಮಾಳಿಗೆ “
ನಾಟಕ – “ಬೆರಳ್ ಗೆ ಕೊರಳ್”
ತಂಡ – “ನಾಲ್ವಡಿ ಸೋಶಿಯಲ್ ಕಲ್ಚರಲ್ & ಎಜ್ಯುಕೇಶನಲ್ ಟ್ರಸ್ಟ್ (ರಿ.) ಮೈಸೂರು “
“ಶ್ರೀ ಸಂತೋಷ್ ಮಹಾಲೆ “ ನಾಟಕ: “ದೇವರ ಹೆಣ”, ತಂಡ : ” ಸಮುದಾಯ (ರಿ.) ಧಾರವಾಡ “
ಶ್ರೇಷ್ಠ ರಂಗ ಬೆಳಕು :
ಪ್ರಥಮ: ಶ್ರೀಮತಿ ಬೀಬಿ ಜಾನ್ – ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಪ್ರಾಯೋಜಿತ ಸ್ಮರಣಿಕೆ –
ಶ್ರೀ ಪೃಥ್ವಿನ್ ಕೆ. ಉಡುಪಿ
ನಾಟಕ – “ದ್ರೋಪತಿ ಹೇಳ್ತವ್ಳೆ”
ತಂಡ – ” ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು “
ದ್ವಿತೀಯ :
ಶ್ರೀಮತಿ ಬೀಬಿ ಜಾನ್ – ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.2,000 ಮತ್ತು ಡಾ. ಬಿ.ಬಿ. ಶೆಟ್ಟಿ ಸ್ಮಾರಕ ಸ್ಮರಣಿಕೆ –
“ಶ್ರೀ ರವಿಶಂಕರ್”
ನಾಟಕ – “ಕ್ರೌಂಚಗೀತಾ”
ತಂಡ -“ರಂಗರಥ (ರಿ.) ಬೆಂಗಳೂರು “
ತೃತೀಯ :
ಶ್ರೀಮತಿ ಬೀಬಿ ಜಾನ್ – ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.1,000 ಮತ್ತು ಹೋಟೆಲ್ ತಾಂಬೂಲಮ್ ಪ್ರಾಯೋಜಿತ ಸ್ಮರಣಿಕೆ –
ಶ್ರೀ ಅರುಣ್ ಮೂರ್ತಿ
ನಾಟಕ – “ಮಾರ ನಾಯಕ”
ತಂಡ – ” ಗಮ್ಯ (ರಿ.) ಶ್ರೀರಂಗಪಟ್ಟಣ, ಮಂಡ್ಯ”
ಶ್ರೇಷ್ಠ ಹಾಸ್ಯ ನಟನೆ :-
ಶ್ರೀ ಮಂಡ್ಯ ರಮೇಶ್ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಯು.ಪಿ. ಶೆಣೈ ಪ್ರಾಯೋಜಿತ ಸ್ಮರಣಿಕೆ –
” ಅಕ್ಷರ ಜ್ಞಾನ ಕಲಾ ಸಂಘ (ರಿ.) ಮರಿಯಮ್ಮನಹಳ್ಳಿ, ವಿಜಯನಗರ ” ತಂಡದ ” ಬೆಪ್ಪ ತಕ್ಕಡಿ ಬೋಳೇಶಂಕರ ” ನಾಟಕದ ” ಕೋಡಂಗಿ ” ಪಾತ್ರಧಾರಿ ” ಶ್ರೀ ಮಂಜು ತಳವಾರ “
ಶ್ರೇಷ್ಠ ಬಾಲ ನಟನೆ (ಇಬ್ಬರಿಗೆ):-
ದಿ| ಮಂಜುಳಾ ಸತ್ಯನಾರಾಯಣ ಹೆಗಡೆ ಸ್ಮಾರಕ ಅವರ ಮಗ ಶ್ರೀಪಾದ ಹೆಗಡೆ ಅವರ ಕೊಡುಗೆ
ನಗದು ಬಹುಮಾನ ರೂ.1,000 ಮತ್ತು ಹೋಟೆಲ್ ಡಯಾನಾ ಪ್ರಾಯೋಜಿತ ಸ್ಮರಣಿಕೆ
“ರಂಗಪಯಣ (ರಿ.) ಬೆಂಗಳೂರು” ತಂಡದ “ಚಂದ್ರಗಿರಿ ತೀರದಲ್ಲಿ” ನಾಟಕದ ” ಪುಟ್ಟ ನಾದಿರ” ಪಾತ್ರಧಾರಿ ” ಪರೀಕ್ಷಿತ್”
“ರಂಗಪಯಣ (ರಿ.) ಬೆಂಗಳೂರು” ತಂಡದ “ಚಂದ್ರಗಿರಿ ತೀರದಲ್ಲಿ” ನಾಟಕದ ” ಪುಟ್ಟ ಜಮೀಲ” ಪಾತ್ರಧಾರಿಣಿ ” ಪ್ರಣಮ್ಯಾ”
“ಮೆಚ್ಚುಗೆ ಬಹುಮಾನಗಳು ಹಾಗೂ ದಿ| ವಿ. ಪ್ರಭಾಕರ ಹೆಗ್ಡೆ , ದಿ| ಯು. ಉಪೇಂದ್ರ ಸ್ಮಾರಕ ಸ್ಮರಣಿಕೆ :-
” ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು ” ತಂಡದ “ದ್ರೋಪತಿ ಹೇಳ್ತವ್ಳೆ ” ನಾಟಕದ ” ದ್ರೋಪತಿ -1″ ಪಾತ್ರಧಾರಿಣಿ ” ಮಂದಾರ ಹೆಬ್ಬಾರ್ ಬಿ.ವಿ “
” ಗಮ್ಯ (ರಿ.) ಶ್ರೀರಂಗಪಟ್ಟಣ, ಮಂಡ್ಯ ” ತಂಡದ “ಮಾರನಾಯಕ ” ನಾಟಕದ ” ಮಾರನಾಯಕ” ಪಾತ್ರಧಾರಿ “ಶ್ರೀ ಆದಿತ್ಯ ಭಾರದ್ವಾಜ್”
” ರಂಗಪಯಣ (ರಿ.) ಬೆಂಗಳೂರು ” ತಂಡದ ” ಚಂದ್ರಗಿರಿ ತೀರದಲ್ಲಿ ” ನಾಟಕದ ” ಮಹಮ್ಮದ್ ಖಾನ್ ” ಪಾತ್ರಧಾರಿ ” ಶ್ರೀ ವಿನೋದ್ ಜ್ಯೋತಿನಗರ”
” ಅಭಿಜ್ಞಾ ಟ್ರಸ್ಟ್ (ರಿ.) ಬೆಂಗಳೂರು ” ತಂಡದ “ಚೋರ ಪುರಾಣ ” ನಾಟಕದ ” ಚೋರ” ಪಾತ್ರಧಾರಿ ” ಶ್ರೀ ಪಿ.ಎಸ್. ರೇಣುಕಾರಾಧ್ಯ”
” ನಾಲ್ವಡಿ ಸೋಶಿಯಲ್ ಕಲ್ಚರಲ್ & ಎಜ್ಯುಕೇಶನಲ್ ಟ್ರಸ್ಟ್ (ರಿ.) ಮೈಸೂರು ” ತಂಡದ ” ಬೆರಳ್ ಗೆ ಕೊರಳ್” ನಾಟಕದ ” ಏಕಲವ್ಯ” ಪಾತ್ರಧಾರಿ ” ಶ್ರೀ ಅಕ್ಷರ್ ಎನ್. ವಿಶ್ವದೀಪ್”
ಶಿಸ್ತಿನ ತಂಡ : ಸಂಚಯ ಟ್ರಸ್ಟ್, ಬೆಂಗಳೂರು ಪ್ರಾಯೋಜಿತ ಜಿ.ಎಸ್. ರಾಮರಾವ್ ಸ್ಮರಣಾ ಪ್ರಶಸ್ತಿ ಹಾಗೂ ನಗದು ಬಹುಮಾನ ₹.5,000/- : ಗಮ್ಯ (ರಿ.) ಶ್ರೀರಂಗಪಟ್ಟಣ, ಮಂಡ್ಯ.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಪಿ.ವಿ.ಎಸ್. ಗ್ರೂಪ್ಸ್ ಮಂಗಳೂರು, ಎಮ್.ಜಿ.ಎಮ್ ಕಾಲೇಜು, ಉಡುಪಿ, ಶ್ರೀ ಪ್ರಮೋದ್ ಮಧ್ವರಾಜ್ ಹಾಗೂ ಹಲವಾರು ಸಂಸ್ಥೆಗಳ, ಕಲಾ ಪೋಷಕರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ 2023ರ ನವೆಂಬರ್ 22 ರಿಂದ ದಶಂಬರ್ 03 ರವರೆಗೆ 12 ದಿನಗಳ ಕಾಲ ಈ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯು ನಡೆಯಿತು. ಈ ಬಾರಿಯ ಸ್ಪರ್ಧೆಯ ತೀರ್ಪುಗಾರರಾಗಿ ಉಡುಪಿಯ ಶ್ರೀ ಕೆ.ಲಕ್ಷ್ಮೀನಾರಾಯಣ ಭಟ್, ಹೆಗ್ಗೋಡಿನ ಶ್ರೀ ಶ್ರೀಪಾದ್ ಭಾಗವತ್ , ಮೈಸೂರಿನ ಶ್ರೀ ವಿನಾಯಕ ಭಟ್ ಹಾಸನಗಿ, ತಿಪಟೂರಿನ ಶ್ರೀ ಸತೀಶ್ ತಿಪಟೂರು ಹಾಗೂ ಉಡುಪಿಯ ಶ್ರೀ ಎಂ.ಶ್ರೀನಿವಾಸ ಭಟ್ ಇವರುಗಳು ಸಹಕರಿಸಿದ್ದರು.
ನಾಟಕ ಸ್ಪರ್ಧೆಯ ಯಶಸ್ವಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ “ರಂಗಭೂಮಿ (ರಿ.) ಉಡುಪಿ” ಸಂಸ್ಥೆಯ ಹೃತ್ಪೂರ್ವಕ ಕೃತಜ್ಞತೆಗಳು.
“ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ “ವು 2024ರ ಜನವರಿ 4ನೇ ವಾರದಲ್ಲಿ ” ರಂಗಭೂಮಿ ರಂಗೋತ್ಸವ” ದಲ್ಲಿ 44ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ” ವು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ” ರಂಗಾಸ್ಥೆ ಟ್ರಸ್ಟ್ (ರಿ.) ಬೆಂಗಳೂರು ” ತಂಡದ ” ದ್ರೋಪತಿ ಹೇಳ್ತವ್ಳೆ” ನಾಟಕದ ಮರು ಪ್ರದರ್ಶನ ಇರುವುದು ಎಂದು “ರಂಗಭೂಮಿ” ಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.