ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಗೋಪೂಜಾ ಕಾರ್ಯಕ್ರಮ
ದಿನಾಂಕ 2.11.2024 ಶನಿವಾರ ಬೆಳಗ್ಗೆ 9:30 -12 ರವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣದ ಆವರಣದಲ್ಲಿ ಗೋಪೂಜೆ ಸೇವಾ ಮಾಡಲು ಭಕ್ತರಿಗೆ ಅವಕಾಶ ವಿದೆ.
ಶ್ರೀ ಕೃಷ್ಣನ ವಿಶೇಷ ಸ್ಥಾನವಾದ ಗೋವಿನಲ್ಲಿ ಭಗವಂತನ ಪೂಜೆಯನ್ನು ಮಾಡುವುದು ಪ್ರತಿಯೊಬ್ಬ ಸಜ್ಜನರ ಕರ್ತವ್ಯವಾಗಿದೆ. ಗೋವಿನ ಎಲ್ಲ ಉತ್ಪನ್ನಗಳು ನಮ್ಮ ಆರಾಧನೆಯಲ್ಲಿ ಭಗವಂತನ ಅನುಗ್ರಹ ಸಂಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ದಿನನಿತ್ಯದ ಆಹಾರ ಕ್ರಮದಲ್ಲೂ ಗೋಕ್ಷೀರ ಗೋಗ್ರಾಸ ಗೋವಿನ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಸಹಕಾರವನ್ನು ನೀಡಲಿದೆ. ಹೀಗಾಗಿ ಇಹಪರಗಳ ಏಳಿಗೆಗೆ ಕಾರಣಭೂತವಾದ ಗೋವಿನ ಗೋಪಾಲಕೃಷ್ಣನ ಪೂಜೆಯನ್ನು ಮಾಡಿ ಎಲ್ಲರೂ ಅನುಗ್ರಹಕ್ಕೆ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಭಾರತಿ ಕೃಷ್ಣಮೂರ್ತಿ 96861 23963, ಮರ್ಣೆ ಉಮೇಶ ಭಟ್ 9886223809 ಇವರನ್ನು ಸಂಪರ್ಕಿಸಬಹುದೆಂದು ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.