ಶ್ರೀಪಲಿಮಾರು ಮಠದ ಆಶ್ರಯದಲ್ಲಿರುವ ತತ್ತ್ವಸಂಶೋಧನಾ ಸಂಸತ್ ನಿಂದ “ಶ್ರೀಹರಿವಂಶ” ಶುದ್ಧಪಾಠದ ಪುಸ್ತಕ ಶುಕ್ರವಾರ (28/07/2023) ಚೆನ್ನೈ ನಗರದಲ್ಲಿ ಶ್ರೀಪಲಿಮಾರು ಶ್ರೀಗಳಿಂದ ಅನಾವರಣಗೊಂಡಿತು.
ಇದಕ್ಕೆ ಬೇಕಾದ ತಾಳೆಪತ್ರಗಳು ಬಹುತೇಕ ಭಾಗಗಳು ಉಡುಪಿಯ ಅಷ್ಟಮಠಗಳಲ್ಲಿಯೇ ಲಭಿಸಿವೆ. ಉಳಿದ ಭಾಗಗಳಿಗಾಗಿ ದೇಶಾದ್ಯಂತ ಸುಮಾರು 4 ವರ್ಷಗಳು ಶೋಧನೆ ನಡೆದಿದ್ದು ಒರಿಸ್ಸಾ ಮೊದಲಾದ ಕಡೆ ಕೆಲವು ಶುದ್ಧಪಾಠ ಲಭಿಸಿದ್ದು ಆಶ್ಚರ್ಯಕರ ಸಂಗತಿಯೇ ಸರಿ. ಈ ಹರಿವಂಶದ ಶುದ್ಧಪಾಠ ಇದೇ ಪ್ರಥಮ ಬಾರಿಗೆ
ವಿ||ಬೆ. ನಾ.ವಿಜಯಿಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ತತ್ವ ಸಂಶೋಧನಾ ಸಂಸತ್ ನಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಅರ್ಥ ಸಹಿತ ಬಿಡುಗಡೆಯಾಗಿದ್ದು ಎಲ್ಲಾ ಆಸಕ್ತ ಭಕ್ತರೂ ಓದಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಶ್ರೀಗಳು,ಈ ಗ್ರಂಥವು ಬಹಳ ಅಪೂರ್ವವಾದದ್ದು, ಇದರಲ್ಲಿ ಮಹಾಭಾರತ ಹಾಗೂ ಭಾಗವತದಲ್ಲಿ ಹೇಳದೇ ಇರುವ ಅಪೂರ್ವ ಸಂಗತಿಯನ್ನು ಹೇಳಲಾಗಿದೆ. ಹಾಗೂ ಹಲವಾರು ಪುರಾಣಗಳಲ್ಲಿರುವ ವಿರೋಧಗಳಿಗೆ ಇದು ನಿರ್ಣಾಯಕವಾಗಿದೆ. ಗ್ರಂಥಸಂಶೋಧನೆಯು ಉಡುಪಿಯ ಅಷ್ಟಮಠಾಧೀಶರ ಹಾಗೂ ಸುಬ್ರಮಣ್ಯ ಶ್ರೀಗಳ ಸಹಕಾರದಿಂದ ಮತ್ತು ವಿ|| ಬೆ. ನಾ. ವಿಜಯಿಂದ್ರಾಚಾರ್ಯರು ಹಗಲಿರುಳು ನಡೆಸಿದ ಕಠಿಣ ಪರಿಶ್ರಮ ತುಂಬಾ ಪ್ರಶಂಸನೀಯ.
ಅಧಿಕಮಾಸವಾದ್ದರಿಂದ ಈ ಪರ್ವ ಕಾಲದಲ್ಲಿಯೇ ಗ್ರಂಥದ ಸಮರ್ಪಣಾ ಕಾರ್ಯಕ್ರಮ ನಡೆದಿದೆ.
ಅತೀ ಸುಲಭವಾದ ಕನ್ನಡ ಅನುವಾದ ಸಹಿತವಾಗಿ ಇರುವುದರಿಂದ ಈ ಗ್ರಂಥದ ಪ್ರಯೋಜನ ಎಲ್ಲರೂ ಪಡೆಯಬಹುದಾಗಿದೆ. ಹಾಗೆಯೇ ಅಧಿಕಾಮಾಸದಲ್ಲಿ ವಿಶೇಷವಾಗಿ ಗ್ರಂಥದಾನ ಸಂಕಲ್ಪ ಮಾಡಿ, ಮುಂದೆ ವಿದ್ವಾಂಸರಿಗೆ ದಾನ ಮಾಡಬಹುದಾಗಿದೆ.
ಮುಂದಿನ 3 – 4 ತಿಂಗಳಿನಲ್ಲಿ ಪುಸ್ತಕ ಸಿಗಲಿದೆ ಎಂದು ಸಂಸತ್ತಿನ ನಿರ್ದೇಶಕರಾದ ವಂಶಿ ಕೃಷ್ಣಾಚಾರ್ಯರು ತಿಳಿಸಿದ್ದಾರೆ.
ಅಧಿಕಮಾಸ – ಚಾತುರ್ಮಾಸ್ಯ ಪರ್ವಕಾಲದಲ್ಲಿ ರೂ.6,000/- ಮುಖಬೆಲೆಯ 10 ಸಂಪುಟಗಳ ಗ್ರಂಥ ಕೇವಲ ರೂ.4,000/- ಕ್ಕೆ ಕಾಯಿದಿರಿಸಬಹುದಾಗಿದೆ.
10 ಸಂಪುಟಗಳ ಹರಿವಂಶ ಗ್ರಂಥವನ್ನು ಕಾಯಿದಿರಿಸುವ ಮೂಲಕ ರಿಯಾಯತಿ ದರದ ಪ್ರಯೋಜನವನ್ನು ಆಸಕ್ತ ಜಿಜ್ಞಾಸುಗಳು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
ಡಾ|| ವಂಶಿಕೃಷ್ಣಾಚಾರ್ – 8123458634