ತುಳು ಸಂಘಟನೆ, ಚಳುವಳಿಗೆ ದಾಮೋದರ ನಿಸರ್ಗ ಅವರ ಕೊಡುಗೆ ಅನನ್ಯವಾದುದು. ಯಕ್ಷಗಾನ ಬಗೆಗಿನ ಅವರ ಕಾಳಜಿ ಅಪಾರವಾಗಿತ್ತು ಎಂಬುದನ್ನು ಹಿರಿಯ ತುಳು ವಿದ್ವಾಂಸ ಪ್ರೊ. ಎ.ವಿ ನಾವಡ ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ನಿಧನರಾದ ಮಂಗಳೂರು ತುಳು ಕೂಟದ ಅಧ್ಯಕ್ಷರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಶ್ರೀ ದಾಮೋದರ ನಿಸರ್ಗ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಪ್ರೊ..ಎ.ವಿ ನಾವಡರು ತಮಗೂ ದಾಮೋದರ ನಿಸರ್ಗ ಅವರಿಗಿದ್ದ ಸ್ನೇಃ, ಸಂಬAಧದ ಬಗ್ಗೆ ಮಾತನಾಡಿದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ಅಕಾಡೆಮಿ ಜೊತೆಗೆ ದಾಮೋದರ ನಿಸರ್ಗ ಅವರು ನಿರಂತರ ಬಾಂಧವ್ಯ, ಸಂಪರ್ಕವನ್ನು ಉಳಿಸಿಕೊಂಡಿದ್ದರು, ಎಲ್ಲಾ ತುಳು ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಕರಾಗಿ ಭಾಗವಹಿಸುತ್ತಿದ್ದರು ಎಂದು ನೆನಪಿಸಿದರು.
ದಾಮೋದರ ನಿಸರ್ಗ ಅವರ ಪುತ್ರಿ ಡಾ. ವಿನ್ಯಾಸ್ ನಿಸರ್ಗ ಅವರು ಮಾತನಾಡಿ, ತನ್ನ ತಂದೆ ತನ್ನ ವೈಯುಕ್ತಿಕ ಬಯಕೆ ಕಷ್ಟಗಳ ನಡುವೆ ಕೂಡ ತುಳು ಭಾಷೆ, ಸಂಸ್ಕೃತಿಯ ಪರವಾಗಿ ನಿರಂತರವಾಗಿ ಸ್ಪಂದಿಸುತ್ತಿದ್ದರು ಎಂದು ನೆನಪಿಸಿದರು. ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂಬ ಹೋರಾಟಕ್ಕೆ ಅವರು ಸದಾ ಬೆಂಬಲವಾಗಿದ್ದರು ಎಂದು ತಿಳಿಸಿದರು.
ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ಅವರು ಮಾತನಾಡಿ, ಅಖಿಲ ಭಾರತ ತುಳು ಒಕ್ಕೂಟ ಸಂಘಟನೆಯನ್ನು ಮುನ್ನಡೆಸುವಲ್ಲಿ ದಾಮೋದರ ನಿಸರ್ಗ ಅವರ ಪಾತ್ರ ಹಾಗೂ ಕೊಡುಗೆ ಅಪಾರವಾಗಿತ್ತು ಎಂದು ಹೇಳಿದರು.
ಸಭೆಯಲ್ಲಿ ಗಣೇಶ್ ಪೂಜಾರಿ, ರವಿ ಅಲೆವೂರಾಯ ಮಾತನಾಡಿದರು. ಅಕಾಡೆಮಿಯ ರಿಜಿಸ್ಟಾçರ್ ಪೂರ್ಣಿಮಾ, ಸದಸ್ಯರಾದ ನಾಗೆಶ್ ಉದ್ಯಾವರ, ಬೂಬ ಪೂಜಾರಿ, ಅಕ್ಷಯ ಆರ್ ಶೆಟ್ಟಿ ಹಾಗೂ ದಾಮೋದರ ನಿಸರ್ಗ ಅವರ ಕುಟುಂಬಿಕರು, ಅಭಿಮಾನಿಗಳು ಭಾಗವಹಿಸಿದ್ದರು. ******************