ಬಡ ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗುವೆ : ಯಶ್ ಪಾಲ್ ಸುವರ್ಣ
ಮೀನು ಮಾರಾಟ ಮಾಡಿ ಸ್ವಾವಲಂಬಿ ಬದುಕು ನಡೆಸಿ ಕುಟುಂಬವನ್ನು ಸಲಹುವ ಮಹಿಳಾ ಮೀನುಗಾರರ ಜೀವನ ಸರ್ವರಿಗೂ ಮಾದರಿಯಾಗಿದ್ದು, ಮಹಿಳಾ ಮೀನುಗಾರರ ಜೊತೆ ಜೊತೆಗೆ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸುವ ಮಹಿಳೆಯರ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಧ್ವನಿಯಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹೇಳಿದರು.
ಉಡುಪಿ ನಗರದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮತ ಯಾಚನೆ ಮಾಡಿ ಮಾತನಾಡಿದರು.
2009 ರಲ್ಲಿ ಜಿಲ್ಲೆಯ ಮೀನು ಮಾರಾಟ ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಮಹಿಳಾ ಹಸಿ ಮೀನು ಮಾರಾಟ ಸಂಘವನ್ನು ಸ್ಥಾಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರವ ಸಂತೃಪ್ತಿ ಇದ್ದು, ಫೆಡರೇಶನ್ ಅಧ್ಯಕ್ಷನಾಗಿ ಮಹಿಳಾ ಮೀನುಗಾರರಿಗೆ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರದ ಸಾಲ ಯೋಜನೆ, ಸಾಲ ಮನ್ನಾ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣ ಮೊದಲಾದ ಹಲವು ಯೋಜನೆಗಳನ್ನು ಮಹಿಳಾ ಮೀನು ಮಾರಾಟಗಾರರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಮಹಿಳಾ ಹಸಿ ಮೀನು ಮಾರಾಟ ಸಂಘದ ಅಧ್ಯಕ್ಷರಾದ ಬೇಬಿ ಸಾಲ್ಯಾನ್ ಮಾತನಾಡಿ ಯಶ್ ಪಾಲ್ ಸುವರ್ಣ ರವರು ನಮ್ಮ ಸಂಘಟನೆಯ ಆರಂಭದ ದಿನದಿಂದಲೂ ಗೌರವ ಸಲಹೆಗಾರರಾಗಿ ಮಾರ್ಗದರ್ಶನ ನೀಡುವ ಮೂಲಕ ಶಕ್ತಿ ತುಂಬಿದ್ದಾರೆ. ವಿವಿಧ ಸಂದರ್ಭದಲ್ಲಿ ನಮ್ಮ ಸಮಸ್ಯೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಮೂಲಕ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿ ನಿಂತ ಯಶ್ ಪಾಲ್ ಸುವರ್ಣ ಮುಂದಿನ ದಿನದಲ್ಲಿ ಓರ್ವ ಶಾಸಕರಾಗಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಆನಂದ, ಜೊತೆ ಕಾರ್ಯದರ್ಶಿ ಜಯಂತಿ ಗುರುದಾಸ್, ಪ್ರಮುಖರಾದ ಸುಮಿತ್ರಾ, ಭಾರತಿ ಸಾಲ್ಯಾನ್, ರತ್ನಾ ಕಾಂಚನ್ ಹಾಗೂ ಮಹಿಳಾ ಮೀನು ಮಾರಾಟಗಾರರು ಉಪಸ್ಥಿತರಿದ್ದರು.
ಯಶ್ ಪಾಲ್ ಸುವರ್ಣ ರವರು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಹೂ ಮಾಲೆ ಹಾಕಿ ಜೈ ಕಾರ ಹಾಕಿ ಸ್ವಾಗತಿಸಿದರು.
ಮಹಿಳಾ ಮೀನು ಮಾರಾಟಗಾರರ ಸಂಘಟನೆಗೆ ಬೆನ್ನೆಲುಬಾಗಿ ನಿಂತಿರುವ ಯಶ್ ಪಾಲ್ ಸುವರ್ಣ ರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವುದಾಗಿ ಒಕ್ಕೊರಲಿನಿಂದ ಘೋಷಿಸಿದರು.
(ಬಾಕ್ಸ್ ನ್ಯೂಸ್)
ಯಶ್ ಪಾಲ್ ಸುವರ್ಣ ಈಗಾಗಲೇ ತಮ್ಮ ಕ್ರಿಯಾಶೀಲ ವ್ಯಕ್ತಿತ್ವ, ನಾಯಕತ್ವ ಗುಣಗಳಿಂದ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಸಹಕಾರಿ ಕ್ಷೇತ್ರ, ಧಾರ್ಮಿಕ, ಶಿಕ್ಷಣ, ರಾಜಕೀಯ, ಕ್ರೀಡೆ, ಉದ್ಯಮ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದ ಯಶ್ ಪಾಲ್ ಸುವರ್ಣ ತಮ್ಮ ಬದ್ಧತೆ, ಸಂಘಟನಾ ಕೌಶಲ್ಯದಿಂದ ಯುವ ಜನತೆಗೆ ಸ್ಫೂರ್ತಿಯಾಗಿ ಬೆಳೆದು ನಿಂತಿದ್ದಾರೆ.
ಸಮಾಜಮುಖಿ ಚಿಂತನೆ, ದಕ್ಷ ಆಡಳಿತಗಾರರಾಗಿರುವ ಯಶ್ ಪಾಲ್ ಸುವರ್ಣ ರವರಿಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಲಭಿಸಲಿ
ಬನ್ನಂಜೆ ಬಾಬು ಅಮೀನ್
ಖ್ಯಾತ ಜಾನಪದ ವಿದ್ವಾಂಸರು.
ಶಾಸಕ ರಘುಪತಿ ಭಟ್ ತಮ್ಮ ಅವಧಿಯಲ್ಲಿ ಮರಾಠಿ ಸಮುದಾಯದ ಅಭಿವೃದ್ಧಿ ಕಾರ್ಯ ಹಾಗೂ ಬೇಡಿಕೆಗಳಿಗೆ ಸ್ಪಂದಿಸಿ ವಿಶೇಷ ಮುತುವರ್ಜಿ ತೋರಿದ್ದಾರೆ. ಪರಭಾರೆ ನಿಷೇಧದ ಅನ್ವಯ ಗೃಹ ನಿರ್ಮಾಣಕ್ಕೆ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ 10 ಸೆಂಟ್ಸ್ ಜಾಗ ಭೂ ಪರಿವರ್ತನೆಗೆ ವಿಶೇಷ ಅವಕಾಶ, ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ಹತ್ರಕಟ್ಟೆಗಳ ಅಭಿವೃದ್ಧಿಗೆ ಅನುದಾನ ಹಾಗೂ ಹೋಳಿ ಹಬ್ಬದ ಆಚರಣೆಗೆ ವಿದ್ಯಾರ್ಥಿಗಳಿಗೆ ರಜೆ ನೀಡುವ ಮೂಲಕ ಮರಾಠಿ ಸಮುದಾಯದ ಬಗ್ಗೆ ವಿಶೇಷ ಕಾಳಜಿಯಿಂದ ಸ್ಪಂದನೆ ನೀಡಿದ್ದಾರೆ.
ಮುಂದಿನ ದಿನದಲ್ಲಿ ಹಿಂದೂ ಕಾರ್ಯಕರ್ತರಾಗಿ, ನಗರ ಸಭೆ ಸದಸ್ಯರಾಗಿ, ಮೀನುಗಾರಿಕಾ ಫೆಡರೇಶನ್ ಮತ್ತು ಮಹಾಲಕ್ಷ್ಮೀ ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲೂ ಅನುಭವಿಯಾಗಿರುವ ಸಮರ್ಥ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಶಾಸಕರಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸುವ ವಿಶ್ವಾಸವಿದ್ದು ಸದಾ ಬೆಂಬಲವಾಗಿ ನಿಲ್ಲಲಿದೆ.
ಉಮೇಶ್ ಎ. ನಾಯ್ಕ್
ರಾಜ್ಯ ಕಾರ್ಯದರ್ಶಿ
ಬಿಜೆಪಿ ಎಸ್. ಟಿ. ಮೋರ್ಚಾ