ಎಳೆವೆಯಲ್ಲಿಯೇ ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಬೇಕು~ ರವಿರಾಜ್ ಹೆಚ್ ಪಿ.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಸುನಾಗ್ ಆಸ್ಪತ್ರೆ ಆಶ್ರಯದಲ್ಲಿ ಸುನಾಗ್ ನವ್ಯಹಿತ ಬೇಸಿಗೆ ಶಿಬಿರವು ಉಡುಪಿ ಕುಂಜಿಬೆಟ್ಟು ಪರಿಸರದ ಐಡನ್ ಸ್ಟೆ ಹೂಮ್ ನಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಶಿಬಿರಗಳಿಗೆ ಸಹಕಾರವನ್ನು ನೀಡುತ್ತಿದ್ದು, ಈ ಶಿಬಿರದ ಮೂಲಕ ಕನ್ನಡ ನಾಡು-ನುಡಿ ಸಂಸ್ಕೃತಿಯ ಅರಿವನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ನಾಡಿನ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಆಗಮಿಸುತ್ತಿದ್ದು ಒಂದು ಪರಿಪೂರ್ಣ ಶಿಬಿರವಾಗುತ್ತದೆ .ಆಟದ ಮೂಲಕ ಶಿಕ್ಷಣವನ್ನು ಈ ಶಿಬಿರದಲ್ಲಿ ಕಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಜಾದುಗಾರ ಪ್ರೊ.ಶಂಕರ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ತೇಜಸ್ವಿ ಆಚಾರ್ಯ, ಪ್ರಸಿದ್ಧ ಜಾದೂಗಾರ ಜೂ. ಶಂಕರ್ ಉಪಸ್ಥಿತರಿದ್ದರು .
ಶಿಬಿರದ ನಿರ್ದೇಶಕ ಡಾ| ನರೇಂದ್ರ ಕುಮಾರ್ ಎಚ್. ಎಸ್ ಪ್ರಸ್ತಾವಿಸಿ ಸ್ವಾಗತಿಸಿದರು.
ಸಾಹಿತಿ ಎಚ್. ಎಸ್. ನವೀನ್ ಕುಮಾರ್ ಹೊಸದುರ್ಗ ನಿರೂಪಿಸಿ, ಡಾ| ವೀಣಾ ನರೇಂದ್ರ ಕುಮಾರ್ ಧನ್ಯವಾದವಿತ್ತರು.