ಉಡುಪಿ ಪರಿಸರದ ಉದಯೋನ್ಮುಖ ಕಲಾವಿದರಲ್ಲಿ ಸೂಪ್ತ ವಾಗಿರುವ ಪ್ರತಿಭೆಯನ್ನು ಗುರುತಿಸುವ ಮತ್ತು ಸಂಗೀತದ ಅಭಿರುಚಿಯನ್ನು ಬೆಳೆಸಿಕೊಳ್ಳಲು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡಾಗ ಅವರ ಸಾಮರ್ಥ್ಯದ ಅರಿವು ಉಂಟಾಗುತ್ತದೆ ಎಂದು ನೂತನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾ ಪ್ರಬಂಧಕರಾದ ಶ್ರೀ ಗಣೇಶ್ ಸೇರಿಗಾರ್ ಹೇಳಿದರು.
ಅವರು ರಾಗ ವಾಹಿನಿ (ರಿ.)ಸಂಸ್ಥೆ ಮಲ್ಪೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಯೋಗದೊಂದಿಗೆ ನಡೆದ ಸುಗಮ ಸಂಗೀತ ಕಾರ್ಯಾ ಗಾರದಲ್ಲಿ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಬಿಲ್ಲವ ಸಮಾಜ ಸೇವಾ ಸಂಘ ಬನ್ನಂಜೆಯ ಅಧ್ಯಕ್ಷರಾದ ಶ್ರೀ ಮಾಧವ ಬನ್ನಂಜೆಯವರು ಟಿವಿ, ಮೊಬೈಲ್ ಗಳ ಗೀಳಿಗೆ ಇಂದಿನ ಯುವ ಜನತೆ ತೊಡಗಿಸಿಕೊಳ್ಳುವುದಕ್ಕಿಂತ ಇಂತಹ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರಾರ್ಥಿಗಳಿಗೆ ಉಡುಪಿ ಜಿಲ್ಲೆಯ ಪ್ರಸಿದ್ಧ ಸಂಗೀತ ಕಲಾವಿದರಾದ ಡಾ. ಗಣೇಶ್ ಗಂಗೊಳ್ಳಿ ಮತ್ತು ಶಂಕರ್ ದಾಸ್ ಚೆಂಡ್ಕಳ ಇವರು ಸಂಗೀತ ವಾದ್ಯಗಳ ಪರಿಕರ ದೊಂದಿಗೆ ತರಬೇತಿ ನೀಡಿದರು. ವೇದಿಕೆಯಲ್ಲಿ ರಾಗವಾಹಿನಿ (ರಿ.) ಸಂಸ್ಥೆಯ ಅಧ್ಯಕ್ಷರಾದ ಸರೋಜ ರೋಹಿತ್ ಮತ್ತು ಕಾರ್ಯದರ್ಶಿ ರೋಹಿತ್ ಮಲ್ಪೆ ಉಪಸ್ಥಿತರಿದ್ದರು.ಉಪ್ಪುರು ಭಾಗ್ಯಲಕ್ಶ್ಮೀ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಡಿ ಕಿದಿಯೂರು ವಂದಿಸಿದರು