ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮಾಜಿ ಕೇಂದ್ರ ಸಚಿವರಾದ ಶ್ರೀ ಸುರೇಶ್ ಪ್ರಭು ಹಾಗೂ ಶ್ರೀಮತಿ ಉಮಾ ಸುರೇಶ್ ಪ್ರಭುರವರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಶ್ರೀ ಕ್ಷೇತ್ರದ ವತಿಯಿಂದ ನಾಡೋಜ ಡಾ. ಜಿ. ಶಂಕರ್ ರವರು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಶಾಸಕರಾದ ಯಶಪಾಲ್ ಸುವರ್ಣ,ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಗಿರಿಧರ್ ಸುವರ್ಣ, ವಾಸುದೇವ ಸಾಲ್ಯಾನ್, ಶರಣ್ ಕುಮಾರ್ ಮಟ್ಟು,ಉಷಾರಾಣಿ ಬೋಳೂರು, ಸುಗುಣ ಕರ್ಕೇರ, ಮೋಹನ್ ಬಂಗೇರ ಕಾಪು, ವೈ. ಗಂಗಾಧರ್ ಸುವರ್ಣ, ಮನೋಜ್ ಕಾಂಚನ್, ಸುಧಾಕರ್ ಸುವರ್ಣ, ಲಕ್ಷ್ಮಣ್ ಸುವರ್ಣ, ಬೇಬಿ ಎಚ್. ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.