ಫೆ.25: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ 328 ವಿದ್ಯಾರ್ಥಿಗಳಿಗೆ 28 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ:
ಉಡುಪಿ:
ಫೆ.25: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅಧಿನದಲ್ಲಿ ಬರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ 45 ಕಾಲೇಜುಗಳ 328 ವಿದ್ಯಾರ್ಥಿಗಳಿಗೆ 28 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಫೆಬ್ರವರಿ 25 ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಉಡುಪಿ ಅಜ್ಜರಕಾಡು ಟೌನ್ ಹಾಲ್ ಸಭಾಂಗಣದಲ್ಲಿ ಅಯೋಜಿಸಿರುವುದಾಗಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ
ಉಡುಪಿ- ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಶಾಸಕರಾದ ಶ್ರೀ ಯಶ್ಫಾಲ್ ಸುವರ್ಣ,ಬೈಂದೂರ್ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ,ಉಡುಪಿ- ಚಿಕ್ಕಮಗಳೂರು ಮಾಜಿ ಸಂಸದರಾದ ಶ್ರಿ ಜಯಪ್ರಕಾಶ್ ಹೆಗ್ಡೆ,ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ,ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್,ಡಿ.ಡಿ.ಪಿ.ಐ ಶ್ರೀ ಮಾರುತಿ, ಮುನಿಯಾಲು ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಅಧ್ಯಕ್ಷರಾದ ಶ್ರೀ ಮುನಿಯಲು ಉದಯ್ ಕುಮಾರ್ ಶೆಟ್ಟಿ, ಸಾಮಾಜಿಕ ಚಿಂತಕರಾದ ರೇ.ಫಾದರ್ ವಿಲಿಯಮ್ ಮಾರ್ಟೀಸ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಮೊಹಮ್ಮದ್ ಮೌಲ,ಸಮಾಜ ಸೇವಕರಾದ ಶ್ರೀ ಈಶ್ವರ್ ಮಲ್ಪೆ,ಶ್ರೀ ಕಿಶನ್ ಹೆಗ್ಡೆ ಕೊಲ್ಕೆಬೈಲ್,ಶ್ರೀಮತಿ ಮಮತಾ ಶೆಟ್ಟಿ,
ಉಜ್ವಲ್ ಕನ್ಸ್ಟçಕ್ಷನ್ ನ
ಶ್ರೀ ಪುರುಷೋತ್ತಮ ಶೆಟ್ಟಿ,ಉದ್ಯಮಿ ಶ್ರೀಮತಿ ರೇಷ್ಮಾ ತೋಟ,ಸಫಲ್ಯ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ನಿರುಪಮಾ ಪ್ರಸಾದ್ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.