ತುಳುನಾಡಿನ ಅಭಿವೃದ್ಧಿ , ತುಳುವರ ಅಭಿವೃದ್ಧಿ ಮತ್ತು ತುಳುವಿಗಾಗಿ ದುಡಿಯುವ ಸಂಘ ಸಂಸ್ಥೆಗಳ ಅಭಿವೃದ್ಧಿಗಾಗಿ, ತುಳು ಭಾಷೆ ಮತ್ತು ಸಂಸ್ಕೃತಿಯ ಉನ್ನತಿಗಾಗಿ ಹೋರಾಡುವ ಸಂಕಲ್ಪ ಹೊಂದಿರುವ, ಕೇಂದ್ರ ಸರಕಾರದಿಂದ ಅನುಮತಿ ಪಡೆದಿರುವ, ಪ್ರತಿಷ್ಠಿತ ಐ .ಎಸ್. ಒ ಮತ್ತು ಉತ್ಕೃಷ್ಟ ಕಾರ್ಯ ನಿರ್ವಹಣಾ ಪ್ರಮಾಣ ಪತ್ರ ಹೊಂದಿರುವ ಹೆಮ್ಮೆಯ ಸಂಸ್ಥೆ ತುಳು ವರ್ಲ್ಡ್ ಫೌಂಡೇಷನಿನ ಹೊಸ ಪ್ರಧಾನ ಕಛೇರಿಯನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳ ಕಾಲೇಜಿನಲ್ಲಿ ಕಟೀಲು ಶ್ರೀ ಶ್ರೀ ಹರಿನಾರಾಯಣ ಆಸ್ರಣ್ಣ ಮತ್ತು ಕಾಲೇಜು ಆಡಳಿತ ಮಂಡಳಿ ಉದಾರವಾಗಿ ನೀಡಿದ್ದು , ಅದರ ಉದ್ಘಾಟನೆಯನ್ನು ದಿನಾಂಕ ೨೬ ಡಿಸೆಂಬರ್ ೨೦೨೪ ರ ಗುರುವಾರ ೧೦ ಗಂಟೆಗೆ ಕಟೀಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕಚೇರಿಯನ್ನು ಕಟೀಲು ಶ್ರೀ ಶ್ರೀ ಹರಿನಾರಾಯಣ ಆಸ್ರಣ್ಣರು ಉದ್ಘಾಟಿಸಲಿದ್ದು, ಫೌಂಡೆಶನ್ನಿನ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅಬುಧಾಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತ ಮಂಡಳಿಯ ಅಧ್ಯಕ್ಷ ರಾದ ಶ್ರೀ ಸನತ್ ಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ , ಶ್ರೀ ಎ. ಸಿ. ಭಂಡಾರಿ, ಶ್ರೀ ದಿವಾಕರ ಶೆಟ್ಟಿ ಸಾಂಗ್ಲಿ, ಶ್ರೀ ಬಿಪಿನ್ ಚಂದ್ರ ಶೆಟ್ಟಿ, ಶ್ರೀ ಹರಿಕೃಷ್ಣ ಪುನರೂರು, ಶ್ರೀ ದಯಾನಂದ ಕತ್ತಲ್ಸಾರ್, ಶ್ರೀ ಚಂದ್ರಹಾಸ ದೇವಾಡಿಗ, ಶ್ರೀ ಮತಿ ವಜ್ರಾಕ್ಷಿ ಬಾಲಕೃಷ್ಣ ಶೆಟ್ಟಿ ಪೊಳಲಿ, ಶ್ರೀಮತಿ ಜಾನಕಿ ಬ್ರಹ್ಮಾವರ, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ , ಕೊಡಿಯಾಲ ಬೈಲ್, ಡಾ. ಮಾಧವ ಎಂ.ಕೆ. ಪ್ರೊ.ಡಿ. ಯದುಪತಿ ಗೌಡ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಯಶಸ್ಸಿಗೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು , ಸದಸ್ಯರು ಸಹಕರಿಸ ಬೇಕಾಗಿ ಸ್ಥಾಪಕ ನಿರ್ದೇಶಕ ಡಾ.ರಾಜೇಶ ಆಳ್ವ ಮತ್ತು ಪ್ರಧಾನ ಕಾರ್ಯದರ್ಶಿ ಪ್ರೊ. ಪುರುಷೋತ್ತಮ ಬಲ್ಯಾಯ ಬೆಳ್ಮಣ್ ತಿಳಿಸಿರುತ್ತಾರೆ.