ಕಲಾ ತಪಸ್ಸ್ ಲಾಂಚನ ಅನಾವರಣ
ಕರಿನ ಒಂಜಿ ವರ್ಷಡಿಂಚಿ ಇಂದ್ರಾಳಿಡ್ ಅಸಕ್ತರೆಗ್ ಸಂಗೀತ ಶಿಕ್ಷಣ ಕೊರೊಂದುಪ್ಪುನ ಕುಮಾರಿ ಶ್ರಾವ್ಯ ಎಸ್ ಬಾಸ್ರಿ ಮೆರೆನಸಂಗೀತ ಶಾಲೆದ ಪುಧರು ಬೊಕ್ಕ ಲಾಂಚನ ಅನಾವರಣ, ಸರಸ್ವತಿ ಪೂಜೆ ಬೊಕ್ಕ ವಿದ್ಯಾರ್ಥಿಲೆಡ್ದ್ ಗಾನಾರ್ಪಣೆ ಕಾರ್ಯಕ್ರಮ ಇಂದ್ರಾಳಿದ ಶ್ರೀಸವಾಸ್ಯಂ ಡ್ ವೈಭವಡ್ ನಡತುಂಡ್. ಸಭಾಧ್ಯಕ್ಷತೆಡಿತ್ತುದ್,
ಲಾಂಛನ ಅನಾವರಣ ಮಲ್ತುದ್ ಪಾತೆರಿನ ಮಾಹೆದ ಗಾಂಧಿಯನ್ ಸೆಂಟರ್ ನಿರ್ದೇಶಕೆರಾಯಿನ ಪ್ರೊ ವರದೇಶ್ ಹಿರೇಗಂಗೆ ಮೇರು,ಸಂಗೀತ ಮನಸ್ಸುಗ್ ಆನಂದದ ಅನುಭೂತಿನ್ ಕೊರ್ಪುಂಡ್. ಕಲೆ ಪಂಡ ಸಂಗೀತನಾ ನಾಟ್ಯನಾ ಮಾತ್ರ ಅತ್ತ್. ಅಯಿಕ್ ವಿಶೇಷವಾಯಿನ ಬೊಕ್ಕ ವಿಶಾಲವಾಯಿನ ಅರ್ಥವ್ಯಾಪ್ತಿ ಉಂಡು. ಅಂಚಿನ ಕಲೆನ್ ಕರಗತ ಮಲ್ತೊಂಬಿನ ಸುಲಭದ ವಿಷಯ ಅತ್ತ್. ಸಂಗೀತದಂಚ ಶಾಸ್ತ್ರೀಯ ಪರಂಪರೆದ ಕಲೆನ್ ಮೈಗೂಡಿಸಾವೊಡಾಂಡ ಏಕಾಗ್ರತೆ, ಅಚಲವಾಯಿನ ಶ್ರದ್ಧೆ ಬೊಕ್ಕ ಶಿಸ್ತುಡ್ ತಪಸ್ಸುದಲೆಕ್ಕ ಸಿದ್ಧ ಮಲ್ಪುನ ಅತ್ಯಗತ್ಯ . ಈ ನಿಟ್ಟುಡ್ ಶ್ರಾವ್ಯನ ಸಂಗೀತ ಶಾಲೆಗ್ ಆಯ್ಕೆ ಮಲ್ದಿನ ಪುದರು – ಕಲಾ ತಪಸ್ಸ್ ಬೊಕ್ಕ ಅಯಿಕ್ ಪೂರಕವಾಗಿ ರಚಿಸಿದ ಲಾಂಛನವು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕಲಾ ತಪಸ್ಸ್ ಹೆಸರು ಮತ್ತು ಲಾಂಚನವನ್ನು ಹೆಮ್ಮೆಯಿಂದ ಅನಾವರಣ ಗೊಳಿಸುತ್ತಾ ಈ ಸಂಸ್ಥೆಯು ಶಾಶ್ವತವಾದ ಕೀರ್ತಿಯನ್ನು ಪಡೆಯಲಿ ಎಂದು ಪ್ರೊ ವರದೇಶ ಹಿರೇಗಂಗೆ ಹೇಳಿದರು. ಇನ್ನೊಬ್ಬರಿಗೆ ಕಲಿಸುವುದರಿಂದ ದ್ವಿಮುಖ ಲಾಭವಿದೆ. ದೀಪದಿಂದ ದೀಪಗಳು ಬೆಳಗಿದಂತೆ , ಜ್ಞಾನದಾನದಿಂದ ಜ್ಞಾನವೂ ಇಮ್ಮಡಿಗೊಳ್ಳುತ್ತದೆ, ಪಸರಿಸುತ್ತಲೂ ಹೋಗುತ್ತದೆ. ಕಲಿಸುವುದರಿಂದ ಸ್ವಂತ ಕಲಿಕೆಯಲ್ಲಿಯೂ ನಿರಂತರತೆಯನ್ನು ಕಾಯ್ದುಕೊಳ್ಳುತ್ತಾ ಅಪಾರ ಪಾಂಡಿತ್ಯವನ್ನು ಗಳಿಸಬಹುದಾಗಿದೆ. ಇಂತಹ ಜ್ಞಾನಾರ್ಜನೆಯ ಯಜ್ಞ ಸದಾ ಮುಂದುವರಿಯಲಿ ಎಂದು ಪ್ರೊ ಹಿರೇಗಂಗೆ ಆಶಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂರವರು ಜ್ಯೋತಿ ಬೆಳಗಿಸಿ ಮಾತನಾಡಿ ಸಂಗೀತ ಕಲಿಕೆಯ ಮಹತ್ವವನ್ನು ಸಾದ್ಯಂತವಾಗಿ ವಿವರಿಸಿ ವಿದ್ಯಾರ್ಥಿಗಳನ್ನು ಹರಸಿದರು. ಇನ್ನೋರ್ವ ಅತಿಥಿ ಡಾ ಕಲ್ಯಾ ಸುರೇಶ ಶೆಣೈಯವರು ಶುಭಾಶಂನೆಗೈದರು.
ಅರ್ಥಪೂರ್ಣ ಲಾಂಚನವನ್ನು ಸಂಸ್ಥೆಗಾಗಿ ವಿನ್ಯಾಸಗೊಳಿಸಿದ ಖ್ಯಾತ ವೆಬ್ ಡಿಸೈನರ್ ಶಶಿಕಾಂತ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸಗೌರವ ಪೂರ್ವಕ ಅಭಿನಂದಿಸಲಾಯಿತು. ಸಂಗೀತ ಶಿಕ್ಷಕಿ ಶ್ರಾವ್ಯ ಎಸ್ ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಗೆ ಕಲಾ ತಪಸ್ಸ್ ಹೆಸರನ್ನು ಆಯ್ಕೆ ಮಾಡಿದ ಹಿನ್ನಲೆಯನ್ನು ಪ್ರಚುರಪಡಿಸಿದರು. ಶ್ರವಣ್ ಎಸ್ ಬಾಸ್ರಿ ಸಂಸ್ಥೆಯ ಮುಂದಿನ ಯೋಚನೆ ಯೋಜನೆ, ಸಾಮಾಜಿಕ ಜಾಲತಾಣದ ನಿರ್ವಹಣೆ ಮುಂತಾದವುಗಳ ಕುರಿತು ಮಾಹಿತಿ ನೀಡಿದರು. ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ದಂಪತಿಗಳಿಗೆ ಶಿಷ್ಯೆ ಶ್ರಾವ್ಯ ಗುರುವಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳಾದಶ್ರೀಪಾದ, ಸುಧಶ್ರೀ ಮತ್ತು ಸಂಜನಾ ಪ್ರಾರ್ಥಿಸಿದರು, ವಿದ್ಯಾರ್ಥಿ ಶ್ರೀಮತಿ ಲಕ್ಷ್ಮೀ ಪುರಾಣಿಕ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಬಾಸ್ರಿಯವರು ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಶ್ರೀಮತಿ ದಿವ್ಯಾ ಯೋಗೀಶ್ ವಂದಿಸಿದರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಗೆ ವಿಶೇಷ ಸಂಗೀತ ತರಗತಿ, ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂರವರಿಂದ ವಿದ್ಯಾರ್ಥಿಗಳಿಗೆ ಆಶೀರ್ವಾದಪೂರ್ವಕ ಸಂಗೀತ ಪಾಠಗೀತ ಸಂವಾದ, ಮತ್ತು ವಿವಿಧ ಸಂಗೀತ ಸಂಬಂಧೀ ವಿನೋದದಾಟಗಳನ್ನು ನೆರವೇರಿಸಲಾಯಿತು.