ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲ
ವ್ಯವಸ್ಥಾಪಕರು: ದ. ಕ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ
ಉಡುಪಿ ಉಚ್ಚಿಲ ದಸರಾ – 2026
ದಿನಾಂಕ: 11 ಅಕ್ಟೋಬರ್ 2026 ರಿಂದ 21 ಅಕ್ಟೋಬರ್ 2026
ಪತ್ರಿಕಾ ಪ್ರಕಟಣೆ
ಆಸ್ತಿಕ ಬಂಧುಗಳ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲಿ.. ಕಳೆದ 4 ವರ್ಷಗಳಲಿ.., ಆಯೋಜನ ಮಾಡಲಾದ ದಸರಾ ಮಹೋತ್ಸವವು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವುದು ತಮಗೆಲ್ಲರಿಗೂ ತಿಳಿದಿರುವ ವಿಚಾರ,
ಈ ವರ್ಷ 5ನೇ ಬಾರಿಗೆ (ಪಂಚಮ ವರ್ಷ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ “ಉಡುಪಿ ಉಚ್ಚಿಲ ದಸರಾ-2026” ಇದೇ ಬರುವ ಅಕ್ಟೋಬರ್ 11 ರಿಂದ ಆಕ್ಟೋಬರ್ 21 ರವರೆಗೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ಸಭಾಂಗಣದಲಿ ನಡೆಯಲಿದೆ, ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಶಾಕ್ರವಾಗಿ ಪೂಜಾ ಪುರಸ್ಮಾರದ ವಿಧಿವಿಧಾನಗಳು ವಿದ್ಯುಕ್ರವಾಗಿ ನೆರವೇರಲಿದೆ
ಶ್ರೀ ಕ್ಷೇತ್ರದ ಎಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬಂದಿರುವ ಉಡುಪಿ ಜಿಲ್ಲಾ..ಡಳಿತ, ಜಿಲಾ.. ಪೊಲೀಸ್ ಇಲಾಖೆ, ಪತ್ರಿಕಾ ಮಾಧ್ಯಮ ಹಾಗೂ ಭಕ್ತಾಭಿಮಾನಿಗಳ ಸಂಪೂರ್ಣ ಸಹಕಾರವನ್ನು ಈ ಬಾರಿಯೂ ಬಯಸುತ್ತಿದ್ದೇವೆ.
ವಿದ್ಯುದ್ದೀಪಾಲಂಕಾರಕ್ಕೆ ವಿಶೇಷ ಮೆರುಗು
ದಸರಾ ಶೋಭಾಯಾತ್ರೆ ಸಾಗುವ ಮಾರ್ಗದ ಎರಡೂ ಬದಿಗಳಲ್ಲಿರುವ ಮನೆ, ಅಂಗಡಿ ಹಾಗೂ ಮಳಿಗೆಗಳನ್ನು ಜಾತಿ, ಮತ, ಧರ್ಮದ ಯಾವುದೇ ಭೇದವಿಲ್ಲದೆ, ಕಳೆದ ಬಾರಿಯಂತೆ ಈ ಬಾರಿಯೂ ವಿದ್ಯುದ್ದೀಪಾಲಂಕಾರ ಹಾಗೂ ತಳಿರು-ತೋರಣಗಳಿಂದ ಅಲಂಕರಿಸುವ ಮೂಲಕ ದಸರಾ ಸಂಭ್ರಮಕ್ಕೆ ಮೆರುಗು ನೀಡುವಂತೆ ಸಾರ್ವಜನಿಕರಲಿ, ವಿನಂತಿಸುತ್ತೇವೆ.
ವಾಹನಗಳ ಪಾರ್ಕಿಂಗ್ ವ್ಯವಸ್ಥೆ
ದಸರಾ ಮಹೋತ್ಸವದ ಸಂದರ್ಭದಲ್ಲಿ.. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ,
ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ: ಸರಸ್ವತಿ ಶಾಲೆಯ ಮೈದಾನ ಹಾಗೂ ಉಚ್ಚಿಲ ಶ್ರೀ ಮಹಾಲಿಂಗೇಶ್ವರ
ದೇವಸ್ಥಾನದ ವಠಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ.
ಉಡುಪಿ ಕಡೆಯಿಂದ ಬರುವ ವಾಹನಗಳಿಗೆ: ಮಹಾಲಕ್ಷ್ಮೀ ಆಂಗ., ಮಾಧ್ಯಮ ಶಾಲೆಯ ಪಕ್ಕದ ಮೈದಾನದಲ್ಲಿ.. ಪಾರ್ಕಿಂಗ್ ವ್ಯವಸ್ಥೆ.
ಭಕ್ತಾದಿಗಳಿಗೆ ಸುಗಮವಾಗಿ ದೇವರ ದರ್ಶನ ಪಡೆಯಲು ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಪ್ರತಿದಿನ ಸುಮಾರು 1,500 ಸ್ವಯಂಸೇವಕರು ಸೇವೆಯಲ್ಲಿ ತೊಡಗಲಿದ್ದಾರೆ ಸ್ವಚ್ಛತಾ ಕಾರ್ಯಗಳಲ್ಲಿ ಮಹಿಳಾ ತಂಡಗಳು ಹಾಗೂ ಸೌಟ್, ಮತ್ತು ಗೈಡ್ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ,
ದಸರಾ ಮಹೋತ್ಸವದ ಎಲ್ಲಾ 11 ದಿನಗಳ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಮಾಧ್ಯಮಗಳ ಮೂಲಕ ವಿನಂತಿಸಿಕೊಳ್ಳುತ್ತಿದ್ದವೆ
ಪ್ರಮುಖ ಕಾರ್ಯಕ್ರಮಗಳು
1. ವಿದ್ಯುದ್ದೀಪಾಲಂಕಾರ ಉದ್ಘಾಟನೆ:
a. : 10-10-2026 6.30
ಪಡುಬಿದ್ರಿಯಿಂದ ಕಾಪು ಸಮುದ್ರತೀರದವರೆಗೆ ಮಾಡಲಾಗಿರುವ ವಿದ್ಯುದ್ದೀಪಾಲಂಕಾರದ ಉದ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಲಿ, ನಡೆಯಲಿದೆ.


















by