ಉಡುಪಿ ಶ್ವೇತಾ ವಿ ಕಾಮತ್ ಮತ್ತು ವರದರಾಯ ಕಾಮತ್ ಅವರ ಪುತ್ರಿ ಕುಮಾರಿ ಸ್ಮೀತಾ ವಿ ಕಾಮತ್ ಅವರಿಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ರಸಾಯಿನಿಕ ಶಾಸ್ತ್ರದ ಸಂಶೋಧನೆಯಲ್ಲಿ ಪಿ.ಎಚ್.ಡಿ. ಪದವಿ ನೀಡಲಾಗಿದೆ. ಸ್ಮೀತಾ ಮಂಗಳೂರಿನ ಕೆನರಾ ಕಾಲೇಜ್ ನಲ್ಲಿ ಪಿಯುಸಿ ವರೆಗೆ ,ನಂತರ ಸಂತ ಅಲೋಸಿಯಸ್ ಕಾಲೇಜ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆದು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪ್ರೊ| ಎಸ್ ಕೆ ನಟರಾಜ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ “*ಫಂಕ್ಷನಲ್ ನ್ಯಾನೋಮಟೀರಿಯಲ್ ಆಧಾರಿತ ಮೆಂಬ್ರೇನ್ಗಳು ಮತ್ತು ಫಿಲ್ಟ್ರೇಷನ್ ಕಿಟ್ಗಳು ನೀರು ಶುದ್ಧೀಕರಣ ಮತ್ತು ಕಸದ ನೀರಿನ ಶುಧ್ಧೀಕರಣ ಎನ್ನುವ ಸಂಶೋಧನಾ ಫ್ರಬಂಧಕ್ಕೆ ಪಿ.ಎಚ್ .ಡಿ. ನೀಡಲಾಗಿದೆ.
ಸಂಶೋಧನೆಯ ಉದ್ದೇಶ: ಶುದ್ಧ ಕುಡಿಯುವ ನೀರಿನ ಲಭ್ಯತೆಯಿಲ್ಲದ ಹಿಂದುಳಿದ ಸಮುದಾಯಗಳಿಗೆ ಕಡಿಮೆ ವೆಚ್ಚದ, ಸಮುದಾಯ-ಮಟ್ಟದಲ್ಲಿ ಬಳಸಬಹುದಾದ ಶುದ್ಧೀಕರಣ ಕಿಟ್ಗಳನ್ನು ಅಭಿವೃದ್ಧಿಪಡಿಸುವುದು. ಈ ಸಂಶೋಧನೆ ಮೂಲಕ, ಆರ್ಒ ಪ್ಯೂರಿಫೈಯರ್ಗಳ ಹಿನ್ನಡೆಗಳನ್ನು ಪರಿಹರಿಸಲು ವಿಶೇಷ ಗಮನ ಹರಿಸಲಾಗಿದೆ, ಅದರಲ್ಲೂ ನೀರಿನ ವ್ಯರ್ಥತೆ ಮತ್ತು ಫಿಲ್ಟರ್ಗಳ ಬದಲಾವಣೆಯಿಂದ ಉಂಟಾಗುವ ತ್ಯಾಜ್ಯವನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸಲಾಗಿದೆ.
ಇದು ಆರೋಗ್ಯ ಸುಧಾರಣೆ, ಪರಿಸರ ಸಂರಕ್ಷಣೆ ಮತ್ತು ಶುದ್ಧ ಕುಡಿಯುವ ನೀರಿನ ತಂತ್ರಜ್ಞಾನದಲ್ಲಿ ಹೊಸ ಆಯಾಮವನ್ನು ತಂದಿದೆ.