ಉಡುಪಿ ಜಿಲ್ಲಾ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆ …
ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಪರ್ಕಳದ ಸುರಕ್ಷಾ ಸಭಾಭವನದಲ್ಲಿ ಉದ್ಘಾಟನೆ ಮಾಡಿದ ಮಾಜಿ ಜಿಲ್ಲಾಧ್ಯಕ್ಷ ಬಿ. ಎಚ್. ಶೆಟ್ಟಿಗಾರ್ ರವರು ಸಹಕಾರ ಭಾರತೀಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಪ್ರೇರಣೆ ಪಡೆದ ವ್ಯಕ್ತಿ ಮಾನನಿಯ ಲಕ್ಷ್ಮಣ್ ರಾವ್ ವಿನಾಮ್ದಾರ್ ಜನವರಿ 11 ರಂದು ಸ್ಥಾಪಿಸಿದರು ಅವರ ಪರಿಕಲ್ಪನೆ ಸಹಕಾರಿ ಕ್ಷೇತ್ರ ಪ್ರಾಮಾಣಿಕ ಆರ್ಥಿಕ ವ್ಯವಸ್ಥೆ ಸ್ವಚ್ಛತೆಯಿಂದ ನಿರ್ಮಾಣ ಆಗ ಬೇಕಾದರೆ ಉತ್ತಮ ವ್ಯಕ್ತಿಗಳ ನಿರ್ಮಾಣ ಆಗಬೇಕಿದೆ ಆದ್ದರಿಂದ ರಾಷ್ಟ್ರ ನಿರ್ಮಾಣದೊಂದಿಗೆ ವ್ಯಕ್ತಿ ನಿರ್ಮಾಣದ ಕೆಲಸವನ್ನು ದೇಶದಲ್ಲಿ ಸಹಕಾರ ಭಾರತೀಯ ಪ್ರಾಮಾಣಿಕ ವ್ಯವಸ್ಥೆಯನ್ನ ಮಾಡುತ್ತಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ದಿನೇಶ ಹೆಗ್ಡೆ ಆತ್ರಾಡಿ ವಹಿಸಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು ಸಹಕಾರ ಭಾರತೀಯ ದೇವೋದ್ದೇಶ ಮತ್ತು ಪರಿಚಯವನ್ನು ಸಹಕಾರ ಭಾರತಿ ಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಮಂಜುನಾಥ್. ಎಸ್. ಕೆ, ಸಹಕಾರ ಭಾರತಿ ರಾಷ್ಟ್ರವ್ಯಾಪಿ ಸಹಕಾರಿ ಆಂದೋಲನದಲ್ಲಿ ಬಹಳಷ್ಟು ಸಾಧನೆ ಮಾಡಿದೆ ಎಂದು ತಿಳಿಸಿದರು ಮುಖ್ಯ ಅತಿಥಿಯಾಗಿ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ , ಸುರಕ್ಷಾ ಸಭಾಭವನದ ರಾಮಮೂರ್ತಿ ಭಟ್, ಜಿಲ್ಲಾ ಮಹಿಳಾ ಪ್ರಮುಖ್ ಆಶಾ ಹೆಗ್ಡೆ, ಉಡುಪಿ ತಾಲೂಕು ಅಧ್ಯಕ್ಷ ಪಾಂಡುರಂಗ ಕಾಮತ್ ಎಳ್ಳಾರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಿತ್ ಕುಮಾರ್ , ಕಾರ್ಯಕ್ರಮದ ನಿರೂಪಣೆ ಬಾಲಕೃಷ್ಣ ಮದ್ದೋಡಿ ಮಾಡಿದರು ಜಿಲ್ಲಾ ಕಾರ್ಯದರ್ಶಿ ಸುದೀಶ್ ನಾಯಕ್ ವಂದನಾರ್ಪಣೆಗೆದರು






















by