• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ಅಭಿವಿನ್ಯಾಸ

Tulunada Dhwani by Tulunada Dhwani
August 10, 2026
in news
0
ಅಭಿವಿನ್ಯಾಸ
0
SHARES
3
VIEWS
Share on FacebookShare on TwitterShare on WhatsApp

*ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ: ಡಾ. ವಿರೂಪಾಕ್ಷ ದೇವರಮನೆ*

ಉಡುಪಿ, ಆ.10: ವಿದ್ಯಾರ್ಥಿ ಜೀವನ ಚಿನ್ನದ ಗಣಿಯಿದ್ದಂತೆ. ಈ ಹಂತದಲ್ಲಿ ಅವಕಾಶಗಳ ಮಹಾಪೂರವೇ ಇರುತ್ತದೆ. ಆದರೆ ಅವಕಾಶಗಳು ಹೆಚ್ಚಾದಂತೆ ಅಸಡ್ಡೆಯ ಮನೋಭಾವವೂ ಬೆಳೆಯುವ ಅಪಾಯವಿದೆ ಎಂದು ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಹೇಳಿದರು.

ಇಲ್ಲಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಹೊಸದಾಗಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ ಶೈಕ್ಷಣಿಕ ಹಾಗೂ ಸಾಮಾಜಿಕ ವಾತಾವರಣಕ್ಕೆ ಪರಿಚಯಿಸುವ ‘ಅಭಿವಿನ್ಯಾಸ’ ವಿದ್ಯಾರ್ಥಿ ಪ್ರವೇಶ–ಪರಿಚಯ ಕಾರ್ಯಕ್ರಮವನ್ನು ಸೋಮವಾರ ಪುರಭವನದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯೌವ್ವನದಲ್ಲಿ ಉದ್ಭವಿಸುವ ಭಾವನೆಗಳನ್ನು ಗುರುತಿಸಿ, ಅವುಗಳನ್ನು ನಿಯಂತ್ರಿಸುವ ಕೌಶಲ ಬೆಳೆಸಿಕೊಳ್ಳಬೇಕು. ಹತಾಶೆ, ತಿರಸ್ಕಾರ ಹಾಗೂ ಕೀಳರಿಮೆಯ ಭಾವನೆಗಳನ್ನು ಹಂತಹಂತವಾಗಿ ದೂರ ಮಾಡಿಕೊಳ್ಳಬೇಕು ಎಂದರು.

ಪೋಷಕರೊಂದಿಗೆ ಸಾಧ್ಯವಾದಷ್ಟು ಆತ್ಮೀಯ ಸಂಬಂಧವನ್ನು ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ನೇಹಿತರ ಒತ್ತಡಕ್ಕೆ ಒಳಗಾಗಿ ಮದ್ಯ ಹಾಗೂ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

‘ಮೊದಲ ವರ್ಷದಲ್ಲಿಯೇ ನಿಮ್ಮ ವ್ಯಕ್ತಿತ್ವವನ್ನು ವಿಶ್ಲೇಷಿಸಿಕೊಂಡು, ನಿಮ್ಮ ಸಾಮರ್ಥ್ಯಗಳು ಹಾಗೂ ದೌರ್ಬಲ್ಯಗಳನ್ನು ಅರಿತುಕೊಳ್ಳಿ. ಮಾನಸಿಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯ. ಒಂಟಿತನ, ಖಿನ್ನತೆ ಸೇರಿದಂತೆ ಯಾವುದೇ ಮಾನಸಿಕ ಸಮಸ್ಯೆ ಎದುರಾದಲ್ಲಿ ಮುಕ್ತವಾಗಿ ಹಂಚಿಕೊಳ್ಳಿ. ಅಗತ್ಯವಿದ್ದಲ್ಲಿ 14416 ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬಹುದು’ ಎಂದು ಸಲಹೆ ನೀಡಿದರು.

ಉಡುಪಿ ಲೀಡ್ ಬ್ಯಾಂಕ್‌ನ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಆರ್ಥಿಕ ಸಾಕ್ಷರತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಂಡು ಕಾಲೇಜಿನ ಘನತೆಯನ್ನು ಕಾಪಾಡಬೇಕು. ಗಾಂಧೀಜಿ, ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಅರಿತುಕೊಂಡು, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್ ಉಪಸ್ಥಿತರಿದ್ದರು. ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಜೇಂದ್ರ ಕೆ. ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪುರುಷೋತ್ತಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಶರತ್ ಕುಮಾರ್ ವಂದಿಸಿದರು.

Previous Post

ಅಡ್ತಲೆಡ್ ಗೌಜಿದ ಆಟಿಕೂಟ

Next Post

ಉಚ್ಚಿಲಡ್ ತುಪ್ಪದ ಅಪ್ಪ ಸೇವೆ

Related Posts

NITK ಸುರತ್ಕಲ್
news

NITK ಸುರತ್ಕಲ್

September 23, 2026
ರೇಡಿಯೋ ಮಣಿಪಾಲ್
news

ರೇಡಿಯೋ ಮಣಿಪಾಲ್

September 23, 2026
ತುಳು ಭಾಷೆಗ್ ಮಾನ್ಯತೆ ತಿಕ್ಕಿನ ಖುಷಿತ್ತ ಸಂಗತಿ:ಡಾ.ಲೀಲಾಧರ್ ಡಿ.ವಿ.
news

ತುಳು ಭಾಷೆಗ್ ಮಾನ್ಯತೆ ತಿಕ್ಕಿನ ಖುಷಿತ್ತ ಸಂಗತಿ:ಡಾ.ಲೀಲಾಧರ್ ಡಿ.ವಿ.

September 22, 2026
ಸುಮನಸಾ ರಜತ ಸಂಭ್ರಮ
news

ಸುಮನಸಾ ರಜತ ಸಂಭ್ರಮ

September 22, 2026
Next Post
ಉಚ್ಚಿಲಡ್ ತುಪ್ಪದ ಅಪ್ಪ ಸೇವೆ

ಉಚ್ಚಿಲಡ್ ತುಪ್ಪದ ಅಪ್ಪ ಸೇವೆ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

NITK ಸುರತ್ಕಲ್

NITK ಸುರತ್ಕಲ್

September 23, 2026
ರೇಡಿಯೋ ಮಣಿಪಾಲ್

ರೇಡಿಯೋ ಮಣಿಪಾಲ್

September 23, 2026
ತುಳು ಭಾಷೆಗ್ ಮಾನ್ಯತೆ ತಿಕ್ಕಿನ ಖುಷಿತ್ತ ಸಂಗತಿ:ಡಾ.ಲೀಲಾಧರ್ ಡಿ.ವಿ.

ತುಳು ಭಾಷೆಗ್ ಮಾನ್ಯತೆ ತಿಕ್ಕಿನ ಖುಷಿತ್ತ ಸಂಗತಿ:ಡಾ.ಲೀಲಾಧರ್ ಡಿ.ವಿ.

September 22, 2026
ಸುಮನಸಾ ರಜತ ಸಂಭ್ರಮ

ಸುಮನಸಾ ರಜತ ಸಂಭ್ರಮ

September 22, 2026
ತುಳುಕ್ ಮಾನ್ಯತೆ ತಿಕ್ಕಿನ ಖುಷಿತ್ತ ಸಂಗತಿ.

ತುಳುಕ್ ಮಾನ್ಯತೆ ತಿಕ್ಕಿನ ಖುಷಿತ್ತ ಸಂಗತಿ.

September 22, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ