*ಕೆ.ವಿ.ಜಿ ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ (ಕರ್ಕಾಟಕ) ಚಿಕಿತ್ಸೆ.*
ಆಯುರ್ವೇದದ ಪ್ರಕಾರ ಮಳೆಗಾಲದಲ್ಲಿ ದೇಹದಲ್ಲಿ ಅಸಮತೋಲನ (ವಾತ, ಪಿತ್ತ, ಹಾಗೂ ಕಫ ದೋಷಗಳು) ಉಂಟಾಗುವ ಸಂಭವವೇ ಹೆಚ್ಚು.ಇದಕ್ಕೆ ಪರಿಹಾರವಾಗಿ ಆಟಿ ತಿಂಗಳ ಚಿಕಿತ್ಸೆಯು ದೇಹವನ್ನು ಶುದ್ದೀಕರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅರೋಗ್ಯವನ್ನು ವೃದ್ಧಿಸಲು ನೇರವಾಗುತ್ತದೆ.
ಇದನ್ನು ಮನಗಂಡ ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು & ಆಸ್ಪತ್ರೆಯು ಕಳೆದ ಹಲವಾರು ವರ್ಷಗಳಿಂದ ಆಸ್ಪತ್ರೆಯಲ್ಲಿ “ಕರ್ಕಾಟಕ (ಆಟಿ) ಚಿಕಿತ್ಸೆ” ಯನ್ನು ನಡೆಸುತ್ತಾ ಬಂದಿದ್ದು, ಲಕ್ಷಾಂತರ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಅದರಂತೆ ಈ ವರ್ಷವೂ ಆಸ್ಪತ್ರೆಯಲ್ಲಿ ವಿಶೇಷವಾದ “ಕರ್ಕಾಟಕ ಚಿಕಿತ್ಸೆ” ಯು ಆಗಸ್ಟ್ 15, 2026 ವರೆಗೆ ನಡೆಯಲಿದೆ.
ಈ ಚಿಕಿತ್ಸಾ ಪ್ಯಾಕೇಜ್ ನಲ್ಲಿ ತೈಲ ಮಸಾಜ್, ಕಿಝಿ, ಸ್ಟೀಮ್ ಬಾತ್, ಧಾರಾ, ಲೇಪನ ಸೇರಿದಂತೆ ಆಯುರ್ವೇದದ ವಿವಿಧ ಚಿಕಿತ್ಸಯು ಲಭ್ಯವಿದೆ.
ಈ ಚಿಕಿತ್ಸೆಯಿಂದ ರೋಗನಿರೋಧಕ ಶಕ್ತಿ ವೃದ್ಧಿ, ಇಂದ್ರಿಯಗಳ ಪೋಷಣೆ, ತ್ರಿದೋಷಗಳ ಸಮತೋಲನ, ದೇಹ ಶುದ್ದೀಕರಣ ಮುಂತಾದ ಪ್ರಯೋಜನಗಳನ್ನು ಪಡೆಯಬಹುದು. ಮಳೆಗಾಲದಲ್ಲಿ ಉಂಟಾಗುವ ಶೀತ, ಕಫ, ಸಂಧಿವಾತ, ಸ್ನಾಯುನೋವು, ಅಜೀರ್ಣ, ಆಯಾಸ ಮುಂತಾದ ಸಮಸ್ಯೆಗಳು ಹೆಚ್ಚಾಗುವ ಹಿನ್ನಲೆಯಲ್ಲಿ ಆಯುರ್ವೇದದ ಮೂಲಕ ದೇಹವನ್ನು ಬಲಪಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಈ ಚಿಕಿತ್ಸಾ ಕಾರ್ಯಕ್ರಮವು ಸಹಕರಿಯಾಗಲಿದೆ ಹಾಗೂ ಇದರ ಪ್ರಯೋಜನವನ್ನು ಎಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕೆ.ವಿ.ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಯವರು ತಿಳಿಸಿದ್ದಾರೆ.


















by