73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ “ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ” ಎಂಬ ಧ್ಯೇಯ ವಾಕ್ಯದೊಂದಿಗೆ, “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ” ದಿನದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ , ಕರಾವಳಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ., ಸಂತೆಕಟ್ಟೆ, ಉಡುಪಿ ಹಾಗೂ ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಸಂತೆಕಟ್ಟೆಯ ಹೋಟೆಲ್ ಬೃಂದಾವನ ಸಭಾಂಗಣ, ಇಲ್ಲಿ ಏರ್ಪಡಿಸಲಾಗಿತ್ತು. ಸಪ್ತಾಹದ ಉದ್ಘಾಟನೆಯನ್ನು
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನ ಗೌರವಾನ್ವಿತ ಅಧ್ಯಕ್ಷರು , ಸಹಕಾರ ರತ್ನ ಪುರಸ್ಕೃತರು ಶ್ರೀಯುತ .ಬಿ. ಜಯಕರ ಶೆಟ್ಟಿ ಇಂದ್ರಾಳಿರವರು ಉದ್ಘಾಟಿಸಿದರು. ಕರಾವಳಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ., ಸಂತೆಕಟ್ಟೆ ಇದರ ಅಧ್ಯಕ್ಷರಾದ ಶ್ರೀ ಉಮೇಶ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರು , ಉಡುಪಿ ವಿಧಾನ ಸಭಾ ಕ್ಷೇತ್ರ ಹಾಗೂ ನಿರ್ದೇಶಕರು , ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಶ್ರೀಯುತ ಯಶ್ ಪಾಲ್ ಎ ಸುವರ್ಣ , ಶ್ರೀ ಎಂ ಎಂ ಆನಂದ, ಉಪನಿರ್ದೇಶಕರು, ಸಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಉಡುಪಿ ಜಿಲ್ಲೆ , ಶ್ರೀ ಜೆ ಸುಧೀರ್ ಕುಮಾರ್, ಸಹಕಾರ ಸಂಘಗಳ ಸಹಾಯಕನಿಬಂಧಕರು, ಕುಂದಾಪುರ ಉಪ ವಿಭಾಗ, ಶ್ರೀ ಪ್ರಭಾಕರ ಪೂಜಾರಿ, ಮಾಜಿ ಅಧ್ಯಕ್ಷರು, ಉಡುಪಿ ನಗರಸಭೆ, ಶ್ರೀ ಸುಪ್ರಸಾದ್ ಶೆಟ್ಟಿ, ಯುವ ನ್ಯಾಯವಾದಿಗಳು , ಉಡುಪಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಬಲ್ಲಾಳ್ , ನಿರ್ದೇಶಕರಾದ ಶ್ರೀ ಹೆಚ್. ಗಂಗಾಧರ್ ಶೆಟ್ಟಿ, ಶ್ರೀ ಅನಿಲ್ ಎಸ್. ಪೂಜಾರಿ, ಶ್ರೀ ಪ್ರಸಾದ್ ಎಸ್. ಶೆಟ್ಟಿ, ಶ್ರೀ ಅರುಣ್ ಕುಮಾರ್ ಹೆಗ್ಡೆ, ದಿಕ್ಸೂಚಿ ಭಾಷಣಕಾರರಾಗಿ ಶ್ರೀ ಗಣನಾಥ ಎಕ್ಕಾರು,ಅಧ್ಯಕ್ಷರು , ಡಾ. ಶಿವರಾಮ ಕಾರಂತ ಟ್ರಸ್ಟ್ ಕರ್ನಾಟಕ ಸರ್ಕಾರ ಇವರು ಉಪಸ್ಥಿತರಿದ್ದರು.


















by