• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 





Home ಸುದ್ದಿ

ಸುಮನಸಾ ಕೊಡವೂರು

Tulunada Dhwani by Tulunada Dhwani
May 30, 2026
in ಸುದ್ದಿ
0
ಸುಮನಸಾ ಕೊಡವೂರು
0
SHARES
2
VIEWS
Share on FacebookShare on TwitterShare on WhatsApp

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಬೆಳ್ಳಿ ಹಬ್ಬದ ಕುರಿತು ಸುದ್ದಿಗೋಷ್ಠಿ

ಮಾನ್ಯ ಮಾಧ್ಯಮದ ಮಿತ್ರರೇ

ಎರಡೂವರೆ ದಶಕದ ಹಿಂದೆ ಶ್ರೀಸಾಮಾನ್ಯರೊಬ್ಬರ ಮನೆಯೊಂದಕ್ಕೆ ಬೆಂಕಿ ಬಿದ್ದು, ಬದುಕು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾದ ಸಮಯದಲ್ಲಿ ಮನೆ ಪುನರ್‌ನಿರ್ಮಾಣ ಮಾಡಿಕೊಡಲು ಮಾನವೀಯ ಯುವ ಮನಸ್ಸುಗಳು ಒಂದೆಡೆ ಸೇರಿದವು. ಈ ರೀತಿ ಮಾನವೀಯ ಸೇವೆಯ ತುಡಿತದ ಒಳ್ಳೆಯ ಮನಸ್ಸಿನ ಈ ಗುಂಪಿಗೆ ಅನ್ವರ್ಥವಾಗಿಯೇ ಸುಮನಸಾ ಎಂದು ಕರೆಯಲಾಯಿತು. ಮನೆ ಕಟ್ಟಿಕೊಡುವ ಮೂಲಕ ಮನಸುಗಳನ್ನು ಕಟ್ಟಿದ ಈ ಘಟನೆ, ಆ ಮೂಲಕ ಸಂಘಟನೆಯಾದ ‘ಸುಮನಸಾ’ ರಜತ ಸಂಭ್ರಮದಲ್ಲಿದೆ.

25 ವರ್ಷ ಪೂರೈಸುವುದು ಎಂಬುದು ಒಂದು ಮಹತ್ವದ ಘಟ್ಟ. ಸಂಘಟನೆಯೊAದು ಬೆಳ್ಳಿ ಹಬ್ಬ ಆಚರಿಸುವುದು ಎಂದರೆ ಮನುಷ್ಯನೊಬ್ಬ  ಸುವರ್ಣ ಮಹೋತ್ಸವ ಮಾಡಿಕೊಂಡAತೆ. ಯಾಕೆಂದರೆ ಒಂದು ಸಂಘಟನೆಯ ಹುಟ್ಟಿನಲ್ಲಿ ಹಿರಿಯರ ಮಾರ್ಗದರ್ಶನ ಇದ್ದರೂ ಬಹುತೇಕ ಯುವ ಮನಸ್ಸುಗಳು 25 ವರ್ಷದ ಆಸುಪಾಸಿನಲ್ಲಿ ಇರುತ್ತಾರೆ. ಹುಮ್ಮಸ್ಸು, ಉತ್ಸಾಹಗಳು ಪುಟಿಯುತ್ತಿರುತ್ತದೆ. ಸಂಸ್ಥೆಗೆ 25 ವರ್ಷ ಆಗುತ್ತಿದೆ ಎಂದರೆ ಆ ಮನಸ್ಸುಗಳು 50ರ ಆಸುಪಾಸು ತಲುಪಿವೆ ಎಂದರ್ಥ. ಆದರೆ, ಸುಮನಸಾ ಸಂಘಟನೆಯು ಈ ರೀತಿ ಆಗದೇ ಪ್ರತಿ ವರ್ಷ ಯುವ ಮನಸ್ಸುಗಳನ್ನು ಸೇರಿಸಿಕೊಂಡೇ ಬರುತ್ತಿರುವುದರಿಂದ 25 ವರ್ಷ ತುಂಬಿದ ಬಳಿಕವೂ ಅದೇ ಉತ್ಸಾಹ, ಅದೇ ಹುಮ್ಮಸ್ಸಿನಲ್ಲಿ ಸಾಮಾಜಿಕ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.

ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು ಎಂಬ ಮಾತು ಅಕ್ಷರಶಃ ಅನ್ವಯವಾಗುವ ಸುಮನಸಾ ಸಂಘಟನೆಯ ರಜತ ಮಹೋತ್ಸವವನ್ನು ವರ್ಷಪೂರ್ತಿ ಆಚರಿಸಬೇಕು ಎಂಬ ಒತ್ತಾಸೆಯಿಂದ ರಜತ ಸಂಭ್ರಮ ಸಮಿತಿಯನ್ನು ರಚಿಸಲಾಗಿದೆ. ಸುಮನಸಾದೊಂದಿಗೆ ನೇರವಾಗಿ ಗುರುತಿಸಿಕೊಂಡವರು, ಮಾನಸಿಕವಾಗಿ ಜತೆಗೆ ಇರುವವರು, ನಿರಂತರ ಪ್ರೋತ್ಸಾಹ ನೀಡುತ್ತಾ ಬಂದವರು, ಹೊರಗಿದ್ದುಕೊಂಡೇ ‘ಸುಮನಸಾ’ ನಮ್ಮ ಸಂಸ್ಥೆ ಎಂದು ಅಂದು ಕೊಂಡವರು ಎಲ್ಲರೂ ಸೇರಿ ರಜತ ಮಹೋತ್ಸವ ಆಚರಿಸುತ್ತಿದ್ದೇವೆ.

ವರ್ಷಪೂರ್ತಿ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮವು 2026ರ ಮೇ 31ನೇ ಭಾನುವಾರ ಸಂಜೆ 5ಕ್ಕೆ ಕುಂಜಿಬೆಟ್ಟು ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ವಹಿಸಲಿದ್ದಾರೆ. ಪಡುಬಿದ್ರಿಯ ಯಸ್ಸೆನ್ ಸ್ಪೆಶನ್ ಎಕಾನೋಮಿಕ್ ಜೋನ್ ಮುಖ್ಯಸ್ಥರು ಮತ್ತು ಹಿರಿಯ ಮಹಾ ಪ್ರಬಂಧಕರಾದ ಅಶೋಕ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರು ರಜತ ಸಂಭ್ರಮದ ಲೋಗೊ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬುಡ್ನಾರು ಯಕ್ಷ ಸಂಜೀವ ಟ್ರಸ್ಟ್ನ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಭಾಗವಹಿಸಲಿದ್ದಾರೆ.

ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷರಾದ ಪ್ರಮೋದ್ ಮಧ್ವರಾಜ್, ಎಂ.ಎಲ್. ಸಾಮಗ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಗೌರವಾಧ್ಯಕ್ಷ ಎಂ.ಎಸ್. ಭಟ್, ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು ಉಪಸ್ಥಿತರಿರಲಿದ್ದಾರೆ.

ರಜತ ಸಂಭ್ರಮದ ಕಾರ್ಯಕ್ರಮದ ವಿವರ:

ಸಂಜೆ 5: ಸುಮಲಹರಿ ರಂಗಗೀತಾ ಗಾಯನ (ಸುಮನಸಾ ಈವರೆಗೆ ಪ್ರಸ್ತುತ ಪಡಿಸಿದ ಆಯ್ದ ನಾಟಕಗಳ ಗೀತೆಗಳನ್ನು ನಮ್ಮದೇ ಪ್ರತಿಭಾವಂತರು ಹಾಡಲಿದ್ದಾರೆ)

ಸಂಜೆ 6: ಉದ್ಘಾಟನಾ ಸಭಾ ಕಾರ್ಯಕ್ರಮ

ರಾತ್ರಿ 7: ಮಕ್ಕಳ ನಾಟಕ ( ಸ್ನೇಹ, ಸೌಹಾರ್ದ, ಸಂಬಂಧ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಅರಿವಿಗಾಗಿ ಹಮ್ಮಿಕೊಂಡಿದ್ದ ಮಕ್ಕಳ ರಂಗಶಿಬಿರ ‘ಅಟ್ಟಮುಟ್ಟ’ದಲ್ಲಿ ಸಿದ್ಧಗೊಂಡ ನಾಟಕ ‘ರಿಟಯರ್ಡ್ ಬೆಕ್ಕು’ ‘ಸೂಪರ್ ಹೀರೋಸ್ ಆಫ್ ಸುಮನಸಾ’ ಪ್ರದರ್ಶನಗೊಳ್ಳಲಿದೆ. ಚರಿತ್ ಸುವರ್ಣ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.



ಮಾಧ್ಯಮ ಮಿತ್ರರು ಈ ಸಡಗರಕ್ಕೆ ಪ್ರಚಾರವನ್ನು ನೀಡುವ ಮೂಲಕ ಸಾರ್ವಜನಿಕರಿಗೆ ತಲುಪಿಸಬೇಕು ಎಂದು ವಿನಂತಿಸುತ್ತೇವೆ.


ಮಾಧ್ಯಮ ಗೋಷ್ಠಿಯಲ್ಲಿ ರಜತ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ, ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಗೌರವಾಧ್ಯಕ್ಷ ಎಮ್.ಎಸ್.ಭಟ್, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು, ಉಪಾಧ್ಯಕ್ಷ ವಿನಯ್ ಕಲ್ಮಾಡಿ ಉಪಸ್ಥಿತರಿದ್ದಾರೆ.

Previous Post

ತುಲುವೆರೆ ಕಲ ವರ್ಸೋಚ್ಚಯ

Next Post

ಮಧುಶ್ರೀ ಪ್ರಕಾಶನ

Related Posts

ಬ್ಯಾಗ್ ವಿತರಣೆ
ಸುದ್ದಿ

ಬ್ಯಾಗ್ ವಿತರಣೆ

June 12, 2026
ಯಶೋ ಮಾಧ್ಯಮ ಪ್ರಶಸ್ತಿ
ಸುದ್ದಿ

ಯಶೋ ಮಾಧ್ಯಮ ಪ್ರಶಸ್ತಿ

June 12, 2026
ಕರ್ನಾಟಕ ಛಾಯಾರತ್ನ ಪ್ರಶಸ್ತಿ
ಸುದ್ದಿ

ಕರ್ನಾಟಕ ಛಾಯಾರತ್ನ ಪ್ರಶಸ್ತಿ

June 12, 2026
ಚಾಣಕ್ಯ ಪ್ರಶಸ್ತಿ
ಸುದ್ದಿ

ಚಾಣಕ್ಯ ಪ್ರಶಸ್ತಿ

June 11, 2026
Next Post
ಮಧುಶ್ರೀ ಪ್ರಕಾಶನ

ಮಧುಶ್ರೀ ಪ್ರಕಾಶನ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಬ್ಯಾಗ್ ವಿತರಣೆ

ಬ್ಯಾಗ್ ವಿತರಣೆ

June 12, 2026
ಯಶೋ ಮಾಧ್ಯಮ ಪ್ರಶಸ್ತಿ

ಯಶೋ ಮಾಧ್ಯಮ ಪ್ರಶಸ್ತಿ

June 12, 2026
ಕರ್ನಾಟಕ ಛಾಯಾರತ್ನ ಪ್ರಶಸ್ತಿ

ಕರ್ನಾಟಕ ಛಾಯಾರತ್ನ ಪ್ರಶಸ್ತಿ

June 12, 2026
ಚಾಣಕ್ಯ ಪ್ರಶಸ್ತಿ

ಚಾಣಕ್ಯ ಪ್ರಶಸ್ತಿ

June 11, 2026
ಪಲ್ಸ್ ಪೋಲಿಯೋ ಅಭಿಯಾನ

ಪಲ್ಸ್ ಪೋಲಿಯೋ ಅಭಿಯಾನ

June 11, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • job
  • kapu marigudi
  • kitchen
  • rajakeeya
  • science
  • shocking news
  • society
  • spl news
  • sports
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ