ಬಹುನಿರೀಕ್ಷಿತ “ದೇವ್ ದಾಸ್ ನ ಲೀಲಾ” ತುಳು ಸಿನಿಮಾ ತುಳುನಾಡಿನಾದ್ಯಂತ ಎಪ್ರಿಲ್ 24 ಕ್ಕೆ ಬಿಡುಗಡೆಗೊಳ್ಳಲಿದೆ.
ಈಗಾಗಲೇ ಚಿತ್ರದ ಟೀಸರ್ , ಹಾಡುಗಳು, ಟ್ರೇಲರ್ ಜಯಂತಿ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಟ ಎಲ್ಟನ್ ಜೆಫ್ ತಿಳಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ತುಡರ್ ಎಂಬ ತುಳು ಸಿನಿಮಾವನ್ನು ನಿರ್ದೇಶನ ಮಾಡಿದ್ದ ತೇಜೇಶ್ ಪೂಜಾರಿ ಅವರ ದ್ವಿತೀಯ ನಿರ್ದೇಶನದ ಸಿನಿಮಾ ಇದು. ಜಯಂತಿ ಪ್ರೊಡಕ್ಷನ್, ಡಿ ಎಸ್ ಎಂಟರ್ಟೈನ್ಮೆಂಟ್ಸ್ , ಅಪ್ಸರಾ ಎಂಟರ್ಟೈನ್ಮೆಂಟ್ಸ್ ಸಹಭಾಗಿತ್ವದಲ್ಲಿ ತೇಜೇಶ್ ಪೂಜಾರಿ, ದೀಪಕ್ ಸಿಂಗ್ , ಅಪ್ಸರಾ ಎಂಟರ್ಟೈನ್ಮೆಂಟ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟು 35 ದಿನಗಳ ಕಾಲ ಮಂಗಳೂರು, ಮುಡಿಪು, ಬಜ್ಪೆ, ಬೆಂಗಳೂರು ನಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈ ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು ಬಾಲಿವುಡ್ ನ ಪ್ರಖ್ಯಾತ ಗಾಯಕ ಶಾನ್ ಮೊಟ್ಟಮೊದಲ ಬಾರಿಗೆ ತುಳು ಸಿನಿಮಾದಲ್ಲಿ ಹಾಡನ್ನು ಹಾಡಿದ್ದಾರೆ , ದಿವ್ಯ ಕುಮಾರ್ , ದುರಂದರ್ ಖ್ಯಾತಿಯ ಶೆಹಜಾದ್ ಅಲಿ, ಅನಿರುದ್ಧ ಶಾಸ್ತ್ರಿ, ಪ್ರಕಾಶ್ ಮಹಾದೇವನ್ ಗಾಯನ ಇದೆ.
ತಾರಾಗಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್ , ನವೀನ್ ಡಿ ಪಡೀಲ್, ಎಲ್ಟನ್ ಜೆಫ್, ಅದ್ವಿತಿ ಶೆಟ್ಟಿ, ಅನೂಪ್ ಸಾಗರ್ , ಅನುಷಾ ರಾಜ್ , ವಿನಾಯಕ್ ಜಪ್ಪು, ಶೈಲಶ್ರೀ ಮುಲ್ಕಿ , ರಾಧೇಶ್ ಶೆಣೈ, ತಿಮ್ಮಪ್ಪ ಕುಲಾಲ್ ಅಭಿನಯಿಸಿದ್ದಾರೆ.
ಛಾಯಾಗ್ರಾಹಕರಾಗಿ ಸಂತೋಷ್ ಆಚಾರ್ಯ ಗುಂಪಲಾಜೆ , ಸಂಕಲನಕಾರರಾಗಿ ಗಣೇಶ್ ನಿರ್ಚಲ್, ಸಂಗೀತ ನಿರ್ದೇಶಕರಾಗಿ ಸಾಯಿಷ್ ಭಾರದ್ವಾಜ್ ಮತ್ತು ಪ್ಯಾಟ್ಸನ್ ಪಿರೇರಾ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಚಿತ್ರದ ನಿರ್ದೇಶಕರು ತೇಜೇಶ್ ಪೂಜಾರಿ ನಿರ್ಮಾಪಕರು ದೀಪಕ್ ಸಿಂಗ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೊರಿಯೋಗ್ರಫರ್ಸ್ ಆಗಿ 25 ವರ್ಷಗಳ ಅನುಭವ ಹೊಂದಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ನಟಿ ಅದ್ವಿತಿ ಶೆಟ್ಟಿ, ನಿರ್ದೇಶಕ ತೇಜೇಶ್ ಪೂಜಾರಿ, ನಿರ್ಮಾಪಕ ದೀಪಕ್ ಸಿಂಗ್ ಉಪಸ್ಥಿತರಿದ್ದರು.
























by