*ಶಿಲ್ಪಿ ಮಾಧವ ಆಚಾರ್ಯರಿಂದ ದ.ಕ ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿಯವರಿಗೆ ಚಂದ್ರಮಂಡಲ ರಥ ಹಸ್ತಾಂತರ*
ಉಚ್ಚಿಲ:
ದ.ಕ ಮೊಗವೀರ ಮಹಿಳಾ ಮಹಾಜನ ಸಂಘ (ರಿ) ಮತ್ತು ಬೆಳ್ಳಿ ರಥ ಸಮಿತಿಯ ವತಿಯಿಂದ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಸಮರ್ಪಣೆ ಮಾಡಲಿರುವ ಚಂದ್ರ ಮಂಡಲ ರಥವನ್ನು
ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಶಿಲ್ಪಿ ಮಾಧವ ಆಚಾರ್ಯ ಹಸ್ತಾಂತರಿಸುವ
ಕಾರ್ಯಕ್ರಮ ಇಂದು ದಿನಾಂಕ 28/03/2026 ರಂದು ಶ್ರೀ ಮಹಾಲಕ್ಷ್ಮೀ ದೇವಾಲಯಲ್ಲಿ ನಡೆಯಿತು.
ಸುಮಾರು ರೂ.ಮೂವತ್ತೈದು ಲಕ್ಷ ವೆಚ್ಚದಲ್ಲಿ
ತಯಾರಿಸಿದ ಚಂದ್ರ ಮಂಡಲ ರಥವನ್ನು
ದ.ಕ ಮೊಗವೀರ ಮಹಿಳಾ ಮಹಾಜನ ಸಂಘ(ರಿ) ಮತ್ತು ಬೆಳ್ಳಿ ರಥ ಸಮಿತಿಯವರಿಗೆ
ಶಿಲ್ಪಿ ಮಾಧವ ಆಚಾರ್ಯರು
ಹಸ್ತಾಂತರಿಸುವ
ಕಾರ್ಯಕ್ರಮ ಶ್ರೀ ಮಹಾಲಕ್ಷ್ಮೀ ದೇವಾಲಯದ ಸನ್ನಿಧಿಯಲ್ಲಿ ನಡೆಯಿತು.
ಈ ಕಾರ್ಯಕ್ರಮ ದಲ್ಲಿ
ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ್ ಸುವರ್ಣ,
ದ.ಕ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾಶರತ್, ಕಾರ್ಯದರ್ಶಿ ಪೂರ್ಣಿಮಾ ಚಂದ್ರಶೇಖರ್,
ಬೆಳ್ಳಿ ರಥ ಸಮಿತಿಯ ಅಧ್ಯಕ್ಷೆ ಉಷಾರಾಣಿ, ಕಾರ್ಯದರ್ಶಿ ಶುಭಾ ದಿನೇಶ್, ಮತ್ತು ಸರ್ವ ಸದಸ್ಯರು, ಕ್ಷೇತ್ರ ಸಮಿತಿಯವರಿಂದ
ನಾರಾಯಣ ಕರ್ಕೇರಾ,ಸಂಜೀವ ಬಂಗೇರ ಮೋಹನ್ ಬಂಗೇರ, ಕಾಪು ನಾಲ್ಕು ಪಟ್ನ ಅಧ್ಯಕ್ಷರದ ಮನೋಜ್ ಕಾಂಚನ್, ನಿಕಟ ಪೂರ್ವ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್,ಮೆಂಡನ್ ಸುಜಿತ್ ಸಾಲ್ಯಾನ್, ನಿಶಾನ್ ಕುಂದರ್ ಏರ್ಮಾಲ್,
ಶೇಖರ್ ಪುತ್ರನ್ ಮತ್ತಿತರರು
ಉಪಸ್ಥಿತರಿದ್ದರು. ಶ್ರೀ ದಿನೇಶ್ ಎರ್ಮಾಳು ಕೊಡುಗೆಯಾಗಿ ನೀಡಿರುವ ರಥದ ಶಿಖರಕ್ಕೆ ಚಿನ್ನದ ಛತ್ರಿಯನ್ನು ಈ ಸಂದರ್ಭದಲ್ಲಿ ಸಮರ್ಪಿಸಿದರು
























by