• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿ

Tulunada Dhwani by Tulunada Dhwani
August 16, 2026
in news
0
ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿ
0
SHARES
6
VIEWS
Share on FacebookShare on TwitterShare on WhatsApp



ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿಗೆ ವಿಜಿತ್ ಕುಮಾರ್ ಶೆಟ್ಟಿ ಸಂಚಾಲಕರಾಗಿ ನೇಮಕ

ಕಟೀಲ್: ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಪರಂಪರೆಯ ಪ್ರಮುಖ ತಾಣವಾಗಿರುವ ನಿನ್ನಿಕಲ್ಲು ಪಾದೆಯ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್, ಕಟೀಲ್ ವತಿಯಿಂದ ವಿಜಿತ್ ಕುಮಾರ್ ಶೆಟ್ಟಿ ದೊಡ್ಡಮನೆ, ಕೊರಂಗ್ರಪಾಡಿ ಅವರನ್ನು ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಫೌಂಡೇಶನ್‌ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ತುಳುವ ಮಹಾಸಭೆ ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅರವಿಂದ್ ಬೆಲ್ಚಾಡ ಹಾಗೂ ಕೇಂದ್ರೀಯ ಸಮಿತಿ ಸಂಚಾಲಕ ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು.

ವಿಜಿತ್ ಕುಮಾರ್ ಶೆಟ್ಟಿ ಅವರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಿ.), ಉಡುಪಿ ಇದರ ಅಧ್ಯಕ್ಷರಾಗಿದ್ದು, ಉಡುಪಿ ಗ್ರಾಮೀಣ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟಬಲ್ ಟ್ರಸ್ಟ್‌ನ ಖಜಾಂಜಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.

ನಿನ್ನಿಕಲ್ಲು ಪಾದೆಯ ಅಭಿವೃದ್ಧಿ, ಸಂರಕ್ಷಣೆ ಹಾಗೂ ಸಮಗ್ರ ಅಭ್ಯುದಯಕ್ಕಾಗಿ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸುವುದು, ಸ್ಥಳೀಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರವನ್ನು ಸಂಘಟಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನೂತನ ಸಂಚಾಲಕರಾಗಿ ವಿಜಿತ್ ಕುಮಾರ್ ಶೆಟ್ಟಿ ಅವರು ನಿರ್ವಹಿಸಲಿದ್ದಾರೆ.

ನವೆಂಬರ್ 2, 3 ಮತ್ತು 4ರಂದು ನಿನ್ನಿಕಲ್ಲು ಪಾದೆಯಲ್ಲಿ ನಡೆಯಲಿರುವ ಅಷ್ಟಮಂಗಳ ಚಿಂತನೆಯ ಹಿನ್ನೆಲೆಯಲ್ಲಿ ಈ ನೇಮಕವು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ನಿನ್ನಿಕಲ್ಲು ಪಾದೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯುವುದರೊಂದಿಗೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯಗಳಿಗೆ ಸೂಕ್ತ ರೂಪುರೇಷೆ ರೂಪಿಸುವ ನಿಟ್ಟಿನಲ್ಲಿ ಅಷ್ಟಮಂಗಳ ಚಿಂತನೆ ನಡೆಯಲಿದೆ.

ಈ ಸಂದರ್ಭದಲ್ಲಿ ನಿನ್ನಿಕಲ್ಲು ಪಾದೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚಿಂತನೆ ನಡೆಯಲಿದ್ದು, ಅದರ ಮುಂದುವರಿದ ಕಾರ್ಯಯೋಜನೆಗಳನ್ನು ರೂಪಿಸುವಲ್ಲಿ ನೂತನ ಅಭಿವೃದ್ಧಿ ಸಮಿತಿ ಪ್ರಮುಖ ಪಾತ್ರ ವಹಿಸಲಿದೆ.

ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಪರಂಪರೆಯ ಮಹತ್ವದ ತಾಣವಾಗಿ ನಿನ್ನಿಕಲ್ಲು ಪಾದೆಯನ್ನು ಅಭಿವೃದ್ಧಿಪಡಿಸುವ ತುಳುವರ್ಲ್ಡ್ ಫೌಂಡೇಶನ್, ಕಟೀಲ್‌ನ ಆಶಯಕ್ಕೆ ವಿಜಿತ್ ಕುಮಾರ್ ಶೆಟ್ಟಿ ಅವರ ಸಾಮಾಜಿಕ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ವಿವಿಧ ಕ್ಷೇತ್ರಗಳೊಂದಿಗಿನ ಸಂಪರ್ಕಗಳು ಹೆಚ್ಚಿನ ಬಲ ನೀಡಲಿವೆ.

ವಿಜಿತ್ ಕುಮಾರ್ ಶೆಟ್ಟಿ ಅವರ ನೇಮಕವನ್ನು ತುಳುವ ಮಹಾಸಭೆಯ ಅಂತರರಾಷ್ಟ್ರೀಯ, ರಾಷ್ಟ್ರೀಯ, ಜಿಲ್ಲಾ ಹಾಗೂ ವಲಯ ಸಮಿತಿಗಳ ಪದಾಧಿಕಾರಿಗಳು ಮತ್ತು ನನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Previous Post

ಮಸಾಲೆ ತಯಾರಿಕಾ ಘಟಕ

Next Post

ನಾಗರಪಂಚಮಿ ಗ್ ರಜೆ ಘೋಷಣೆ

Related Posts

ರಂಗ ಬಾಂಧವ್ಯ ಡ್ದ್ ಪೊಸ ಅನುಭವ
news

ರಂಗ ಬಾಂಧವ್ಯ ಡ್ದ್ ಪೊಸ ಅನುಭವ

September 9, 2026
ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ
news

ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ

September 8, 2026
ಪಡುಬಿದ್ರಿ ಟೋಲ್ ಗೇಟ್
news

ಪಡುಬಿದ್ರಿ ಟೋಲ್ ಗೇಟ್

September 5, 2026
ಕೇಪು ಅಜಿಲೆರೆಗ್ ಚಾವಡಿ ತಮ್ಮನ
news

ಕೇಪು ಅಜಿಲೆರೆಗ್ ಚಾವಡಿ ತಮ್ಮನ

September 3, 2026
Next Post
ನಾಗರಪಂಚಮಿ ಗ್ ರಜೆ ಘೋಷಣೆ

ನಾಗರಪಂಚಮಿ ಗ್ ರಜೆ ಘೋಷಣೆ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ರಂಗ ಬಾಂಧವ್ಯ ಡ್ದ್ ಪೊಸ ಅನುಭವ

ರಂಗ ಬಾಂಧವ್ಯ ಡ್ದ್ ಪೊಸ ಅನುಭವ

September 9, 2026
ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ

ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ

September 8, 2026
ಪಡುಬಿದ್ರಿ ಟೋಲ್ ಗೇಟ್

ಪಡುಬಿದ್ರಿ ಟೋಲ್ ಗೇಟ್

September 5, 2026
ಕಿಷ್ಣೆ ಪಂಡಿನ ಧರ್ಮ

ಕಿಷ್ಣೆ ಪಂಡಿನ ಧರ್ಮ

September 4, 2026
ಕೇಪು ಅಜಿಲೆರೆಗ್ ಚಾವಡಿ ತಮ್ಮನ

ಕೇಪು ಅಜಿಲೆರೆಗ್ ಚಾವಡಿ ತಮ್ಮನ

September 3, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ