ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು – ಇಂದು ಬೆಳಿಗ್ಗಿನ ಜಾವ ಒಂದೂವರೆಗೆ ದೇವಿಗೆ ನೈಸರ್ಗಿಕ ಪುಣ್ಯಸ್ನಾನ🙏🏻.
ಚಿತ್ರ ಕ್ರಪೆ-ಬ್ರಾಹ್ಮಿ ಭಕ್ತವ್ರಂದದವರಿಂದ🙏🏻
ಇದು ನದಿಯ ಶಾಪ ವಿಮೋಚನೆ ಕಥೆ
ಕೈಲಾಸದಲ್ಲಿ ಶಿವ ಪಾರ್ವತಿಯ ಮುಂದೆ ಪಿಂಗಳೆ ಎಂಬ ಅಪ್ಸರೆ ಕೊಬ್ಬಿನಿಂದ ನರ್ತಿಸಲು ಹಿಂಜರುಗಿದಾಗ ದೇವಿಯು ನಿನ್ನನು ನೋಡಿ ಎಲ್ಲರು ಅಸಹ್ಯ ಪಡುವಂತೆ ಕುಬ್ಜೆಯಾಗು ನಿನ್ನ ಮೈ ಬೆನ್ನು ಎಲ್ಲ ಅಂಕುಡೊಂಕು ಆಗಲಿ ಎಂದು ಶಾಪ ಕೊಡುತ್ತಾಳೆ, ಆಗ ಅಪ್ಸರೆಗೆ ತನ್ನ ತಪ್ಪಿನ ಅರಿವಾಗಿ ದೇವೀಯ ಹತ್ತಿರ ಕಣ್ಣೀರು ಇಡುತ್ತಾಳೆ .ಅಮ್ಮ ಏಕೆ ನಿನ್ನ ಮಗಳ ಮೇಲೆ ಇಷ್ಟೊಂದು ನಿಷ್ಕರುಣಿ ಇದೇ , ಕ್ಷಮಿಸು ಎಂದು ಬೇಡಿದಾಗ ತಾಯಿ ಆಯಿತು ಎಂದು ತನ್ನ ಶಾಪಕ್ಕೆ ವಿಮೋಚನೆಯ ದಾರಿ ನೀಡುತ್ತಾರೆ. ಮುಂದೆ ದುಷ್ಟರಾದ ಖರಾಸುರ ಮತ್ತು ರಟ್ಟಾಸುರ ರನ್ನು ಸಂಹಾರ ಮಾಡಲು ನಾನು ಬ್ರಾಹ್ಮಿ ದುರ್ಗಾಪರಮೇಶ್ವರಿ ಯಾಗಿ ಅವತರಿಸುತ್ತೇನೆ ಸಂಹಾರದ ನಂತರ ಉದ್ಭವ ಲಿಂಗ ರೂಪಿಯಲ್ಲಿ ಅವತರಿ ಸುತ್ತೇನೆ ಅಲ್ಲಿಯವರಿಗೂ ನೀನು, ನಾನು ಹೇಳುವ ರೈಕ್ವ ಋಷಿಯ ಬಳಿ ನನ್ನ ಧ್ಯಾನದಲ್ಲಿ ಇರು ಕಾಲ ಸಂದರ್ಭ ಬಂದಾಗ ನನ್ನ ಅವತಾರ ಆದಾಗ ನೀನು ನನ್ನ ಬಳಿ ಕುಬ್ಜ ನದಿಯಾಗಿ ಬಂದು ನನ್ನ ಸ್ಪರ್ಶ ಮಾಡಿ ಮೈತೊಳೆದು ಹೋಗಬೇಕು ಎಂದು ಆದೇಶ ನೀಡುತ್ತಾಳೆ
ಅದೇ ರೀತಿ ಈಗಲೂ ಸಹ ಪ್ರತಿ ವರ್ಷ ಕುಬ್ಜ ನದಿಯು ಉಕ್ಕಿ ಹರಿದು ದೇವಿ ಗುಡಿ ಪ್ರವೇಶಿಸಿ ತಾಯಿಯ ಪಾದ ಮುಟ್ಟಿ ಅಭಿಷೇಕ ಮಾಡಿ ಬರುತ್ತದೆ. ಇದು ಈ ಕ್ಷೇತ್ರದ ಸ್ಥಳಪುರಾಣ🙏🏻