| ನೀರೆಬೈಲೂರು ಬಾಸೆಲ್ ಮಿಷನ್ ಶಾಲೆ ತುಳು ಸಂಭ್ರಮ, ಆಟಿಡೊಂಜಿ ದಿನ
–
ಅಜೆಕಾರು, ಜು, 29: ಜತ್ತನ್ನು ಎಜುಕೇಶನ್ ಸೊಸೈಟಿ ಬೈಲೂರು ಇದರ ಬೈಲೂರು ಬಾಸೆಲ್ ಮಿಷನ್ ಶಾಲೆಯಲ್ಲಿ ತುಳು ಸಂಭ್ರಮಾಚರಣೆ ಮತ್ತು ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ತುಳುನಾಡಿನ ಪರಂಪರೆ ಬಿಂಬಿಸುವ ವಿವಿಧ ಪುರಾತನ ಕಾಲದ ವಸ್ತು ಪ್ರದರ್ಶನ ನಡೆಯಿತು. ಅಕ್ಕಿಮುಡಿ, ಸೇಮಿಗೆ ಮಣೆ, ನೊಗ, ಕಳಶ, ಮರದ ಸೇರು, ಹಾಲಿನ ಕೊಂಡೆ, ಬೀಸುವ ಕಲ್ಲು, ಚೆನ್ನಮಣೆ, ಒನಕೆ, ಕೈಗೋರಿ, ಬೀಸಣಿಗೆ, ತಟ್ಟಿ ಕುಡುವು, ಕೈಸಟ್ಟಿಗೆ, ಲಾಂಟಿನ್ ಸೇರಿದಂತೆ ಹಲವಾರು ವಸ್ತುಗಳು ಗಮನ ಸೆಳೆದವು.
ಈ ಧರ್ಮಗುರುಗಳಾದ ರೆ ಬುಕಾರ್ಟ್ ಬರ್ಟಿ ಅಮ್ಮನ್ನ ಮಾತನಾಡಿದರು.
ಅಧ್ಯಕ್ಷತೆಯನ್ನು ಅಂತಾರಾಷ್ಟ್ರೀಯ ತುಳು ಮಹಾಮಂಡಲದ ಜಿಲ್ಲಾಧ್ಯಕ್ಷ ಉದಯ ಕುಮಾರ್‌ಹೆಗ್ಡೆ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಬಹುಮಾನದ ಆಟೋಟಗಳ
ಪ್ರಶಾಂತ್ ಕುಮಾರ್ ಶೆಟ್ಟಿ ನೆರವೇರಿಸಿ ತುಳು ಭಾಷೆ, ಸಂಪ್ರದಾಯದ ಕುರಿತು ಮಾತನಾಡಿದರು.
ಯರ್ಲವಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಶಾಲಾ ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಭೋಜ ಶೆಟ್ಟಿತುಳು ಭಾಷೆಯ ಕುರಿತು ಮಾತಾಡಿದರು. ವಿದ್ಯಾರ್ಥಿಗಳಿಗೆ ತುಳುವ ಪರಂಪರೆ ಬಿಂಬಿಸುವ ಲಗೋರಿ, ಕುಟ್ಟಿದೊಣ್ಣೆ ಗೋಲಿ ಆಟ, ಬೆನ್ನಿಂಡು, ಚನ್ನಮಣೆ, ಕುಂಟೆಬಿಲ್ಲೆ ಪೊಕ್ಕು ಮುಂತಾದ ಆಟಗಳನ್ನು ಆಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹರಿನ್ ಕನ್ನಡ ಸಂಘದ ಪೂರ್ವಾಧ್ಯಕ್ಷ ಬಹರಿನ್ ತುಳುಕೂಟದ ಆಸ್ಟಿನ್ ಸಂತೋಷ್, – ಸುರೇಖ ಸಂತೋಷ್, ಭಾಗವಹಿಸಿದ್ದರು. ಶಾಲಾ ಅಂಗ್ಲ ಮಾಧ್ಯಮದ ಮುಖ್ಯಶಿಕ್ಷಕಿ ಪ್ರೇಮಲತ ಜತ್ತನ್ನ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಪ್ರಭು ಉಪಸ್ಥಿತರಿದ್ದರು. ಹಂಟಲ ಯಕ್ಷಾನು
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀರೆ ಸುಜಯ್ ಜತ್ತನ್ನ ಸ್ವಾಗತಿಸಿದರು
ಉಪಪ್ರಾಂಶುಪಾಲೆ ಡಾ ಲವಿನಾ ಮರಿಯ, ವೀಕ್ಷಾ ಚೈತ್ರ ಕಾರ್ಯಕ್ರಮ
Sending reply…
Reply



















by